ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಇಂದು ವರ್ಧಂತಿ ಉತ್ಸವ (ಸುದ್ದಿ ಸಂಕ್ಷೇಪ)

Parashurama
Updated On : 15 Feb 2013, 12:24 pm

ಹೊನ್ನಾವರ: ತಾಲೂಕು ಕಳಸನಮೋಟೆಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ದೇವಿಯ ನೂತನ ಕಾಷ್ಠಮೂರ್ತಿಯ ಪ್ರತಿಷ್ಠಾ ವರ್ಧಂತಿ ಉತ್ಸವ  ಫೆ. 15ರಂದು ನಡೆಯಲಿದೆ. ಗಣೇಶ ಪೂಜೆ, ಅಧಿವಾಸ ಹೋಮ ನವಗ್ರಹ ಹೋಮ, ಪ್ರತಿಷ್ಠಾ ಹೋಮ, ತುಳಸಿ-ಮರಿಯಮ್ಮನ ಪ್ರತಿಷ್ಠೆ, ಮಂಗಳಾರತಿ, ಪ್ರಸಾದ ವಿತರಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಕಚೇರಿಗೆ ಮುತ್ತಿಗೆ
ಶಿರಸಿ:  ಅರಣ್ಯ ಅತಿಕ್ರಮಣದಾರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಅರಣ್ಯ ಅತಿಕ್ರಮಣದಾರರು ಸ್ಥಳೀಯ ಉಪ-ವಿಭಾಗೀಯ ಕಚೇರಿಗೆ ಫೆ. 16ರಂದು ಮುತ್ತಿಗೆ ಹಾಕುವ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಚಿಂತನ-ಮಂಥನ
ಶಿರಸಿ:  ನಗರದ ಎಂಇಎಸ್ ಸಂಸ್ಥೆಯ ಕಲಾ ಮತ್ತು ವಿಜ್ಞಾನ ಕಾಲೇಜಿನ ಮೋಟಿನ್ಸರ ಸ್ಮಾರಕ ಸಭಾಭವನದಲ್ಲಿ ಫೆ. 15ರ ಮಧ್ಯಾಹ್ನ 12ಕ್ಕೆ ನೈತಿಕ ಗಂಡಾಂತರ ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಲಯನೆಸ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ಸಾಂತ್ವನ ಮಹಿಳಾ ವೇದಿಕೆ ಮತ್ತು ಭಾರತೀಯ ವೈದ್ಯಕೀಯ ಸಂಘ ಜಂಟಿಯಾಗಿ ಕಾಲೇಜಿನ ಭೂಮಿಕಾ ಸಂಘಟನೆ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಿವೆ. ಅತ್ಯಾಚಾರದಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ನಿಟ್ಟಿನಲ್ಲಿ ಪ್ರಸ್ತುತ ಸಮಾಜದಲ್ಲಿ ಎದುರಾಗಿರುವ ನೈತಿಕ ಗಂಡಾಂತರದ ಸವಾಲಿನ ಕುರಿತು ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಯುವಜನ, ಪಾಲಕ, ವೈದ್ಯಕೀಯ, ಕಾನೂನು, ಆರಕ್ಷಕ, ಮಾಧ್ಯಮ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಪ್ರತಿನಿಧಿಗಳು ಪಾಲ್ಗೊಂಡು ಸಮಾಲೋಚನೆ-ಸಂವಾದ ನಡೆಸಿಕೊಡಲಿದ್ದಾರೆ. ಆಸಕ್ತ ಪಾಲಕರು, ವಿದ್ಯಾರ್ಥಿಗಳು, ಯುವಜನರು ಪಾಲ್ಗೊಳ್ಳಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.
ಹುಲಿ ದಾಳಿಗೆ ಆಕಳು ಬಲಿ
ಜೋಯಿಡಾ:  ತಾಲೂಕಿನ ನಗರಿ ಗ್ರಾಮದಲ್ಲಿ ರೈತನೋರ್ವನ ದನದ ಕೊಟ್ಟಿಗೆಗೆ ದಾಳಿ ಮಾಡಿದ ಹುಲಿ ಆಕಳೊಂದರ ಕುತ್ತಿಗೆ ಹಿಡಿದು ಹೊರ ಜಗ್ಗಿ ಸಾಯಿಸಿದ ಘಟನೆ ನಡೆದಿದೆ. ನಗರಿ ಗ್ರಾಮದ ರೈತ ಪರಶುರಾಮ ಗಾವಡಾಗೆ ಸೇರಿದ ಆಕಳಾಗಿದ್ದು ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದಾಗಿ ತಿಳಿದು ಬಂದಿದೆ. ಈತ ತನ್ನ ಹೊಲದಲ್ಲಿ ನಿರ್ಮಿಸಿದ ಕೊಟ್ಟಿಗೆಗೆ ಏಕಾಏಕಿ ದಾಳಿ ಮಾಡಿದ ಹುಲಿ ಆಕಳನ್ನು ಕೊಂದು, ರಕ್ತ ಹೀರಿ ಪರಾರಿಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸೂಕ್ತ ಪರಿಹಾರಕ್ಕಾಗಿ ವಿನಂತಿಸಲಾಗಿದೆ. ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement