ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ದಾಂಡೇಲಿ ತಾಲೂಕಾಗಿಸಿ: ಸಿಎಂಗೆ ಮನವಿ

Parashurama
Updated On : 15 Feb 2013, 12:23 pm

ದಾಂಡೇಲಿ:   ಬಿಜೆಪಿ ದಾಂಡೇಲಿ ಘಟಕದ ನಿಯೋಗ ಬೆಂಗಳೂರಿಗೆ ತೆರಳಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇವರ ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿ ದಾಂಡೇಲಿ ನಗರವನ್ನು ತಾಲೂಕನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿತು. ಸಮಗ್ರ ಚರ್ಚೆ ನಂತರ ಬಿಡುಗಡೆಯಾಗಲಿರುವ ನೂತನ ತಾಲೂಕು ಪಟ್ಟಿಯಲ್ಲಿ ದಾಂಡೇಲಿಯನ್ನು ಸೇರಿಸಿ ಹೊಸ ಪಟ್ಟಿಯನ್ನು ಘೋಷಿಸಲಾಗುವುದೆಂಬ ನಿಶ್ಚಿತ ಭರವಸೆಯನ್ನು ನೀಡಿದ್ದಾರೆಂದು ನಿಯೋಗದ ಪರವಾಗಿ ಬಿಜೆಪಿ ಮಾಜಿ ಅಧ್ಯಕ್ಷ ರೋಶನ ನೇತ್ರಾವಳಿ ತಿಳಿಸಿದ್ದಾರೆ. ಹಳಿಯಾಳ-ಜೋಯಿಡಾ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜು ಧೂಳಿ, ಬಿಜೆಪಿ ಮುಖಂಡ ಮಂಗೇಶ ದೇಶಪಾಂಡೆ, ನಗರ ಘಟಕ ಬಿಜೆಪಿ ಅಧ್ಯಕ್ಷ ಎಂ.ಸಿ. ಹೆಗಡೆ, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಅಶೋಕ ಪಾಟೀಲ, ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ, ಯುವಮೋರ್ಚಾ ಅಧ್ಯಕ್ಷ ಪ್ರಶಾಂತ ಬಸೂತರ್‌ಕರ, ನಗರಸಭಾ ಸದಸ್ಯ ರವಿ ಸುತಾರ ನಿಯೋಗದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement