ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ದಾಂಡೇಲಿಗೆ ತಾಲೂಕಾಗುವ ಅರ್ಹತೆಯಿದೆ

Parashurama
Updated On : 15 Feb 2013, 12:23 pm

ತಾಲೂಕಾಗುವ ಎಲ್ಲ ಅರ್ಹತೆ ಹೊಂದಿರುವ ಜಿಲ್ಲೆಯ ಹಳಿಯಾಳ, ದಾಂಡೇಲಿ ನಗರವನ್ನು ನೂತನ ಬಜೆಟ್‌ನಲ್ಲಿ ಪರಿಗಣಿಸದೇ ಇರುವುದು ಶೋಚನೀಯ ಎಂದು ದಾಂಡೇಲಿ ತಾಲೂಕು ರಚನಾ ಸಂಯುಕ್ತ ಹೋರಾಟ ಸಮಿತಿಯ ಜಂಟಿ ಸಂಚಾಲಕ ಎ.ಆರ್. ಬವಾಜಿ ಹಾಗೂ ಎಸ್.ಜಿ. ಬಿರಾದಾರ ವಿಷಾದ ವ್ಯಕ್ತಪಡಿಸಿದರು. ಅವರು ಪ್ರಕಟಣೆ ನೀಡಿ, ದಾಂಡೇಲಿಯನ್ನು ತಾಲೂಕನ್ನಾಗಿ ಪರಿಗಣಿಸಬೇಕೆಂದು ಸಮಿತಿಯ ವತಿಯಿಂದ ಜೂನ್ 10, 2009ರಲ್ಲಿ ದಾಂಡೇಲಿ ಬಂದ್ ಆಚರಿಸಿ ಪ್ರತಿಭಟಿಸಲಾಗಿತ್ತು. 1985ರಿಂದ ತಾಲೂಕಿಗಾಗಿ ಅನೇಕ ಹೋರಾಟಗಳು ನಡೆದಿವೆ. ಜನವರಿ 30, 1986ರಂದು ದಾಂಡೇಲಿ ನಗರಪಾಲಿಕೆಯಲ್ಲಿ ಠರಾವು ಸಂಖ್ಯೆ 245ರ ಅನ್ವಯ ತಾಲೂಕನ್ನಾಗಿ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ರಾಜಕೀಯ ಧುರೀಣರೂ, ತಾಲೂಕು ರಚನೆ ಸಮಿತಿಗಳು ಕೂಡ ಸರ್ಕಾರಕ್ಕೆ ದಾಂಡೇಲಿಯನ್ನು ತಾಲೂಕನ್ನಾಗಿ ಮಾಡಲು ಅನೇಕ ಸಲ ಶಿಫಾರಸು ಮಾಡಿದ್ದಿದೆ. ಹುಂಡೇಕಾರ ಸಮಿತಿ, ಎಂ.ಬಿ. ಪ್ರಕಾಶ ಸಮಿತಿ ಕೇವಲ ಸುಳ್ಳು ಆಶ್ವಾಸನೆ ನೀಡಿ ಜನರಿಗೆ ಮೋಸ ಮಾಡಿದಂತಾಗಿದೆ ಎಂದರು.
ಪಕ್ಷಾತೀತ ಹೋರಾಟ: ಸಮಿತಿ ವತಿಯಿಂದ 2009ರಲ್ಲಿ ಉದ್ದೇಶಿತ ದಾಂಡೇಲಿಯ ತಾಲೂಕಿನಲ್ಲಿ 70 ಗ್ರಾಮಗಳ 1,67,975 ಎಕರೆ ಕ್ಷೇತ್ರದಲ್ಲಿ 53,290 ದಾಂಡೇಲಿ ಜನಸಂಖ್ಯೆ, 25,219 ಗ್ರಾಮಾಂತರ ಜನಸಂಖ್ಯೆಯ ವರದಿಯೊಂದಿಗೆ ಉದ್ದೇಶಿತ ತಾಲೂಕಿನ ನಕ್ಷೆಯನ್ನೂ ಕೂಡಾ ಅಂದಿನ ಮುಖ್ಯ ಮಂತ್ರಿಗಳಿಗೆ ಅರ್ಪಿಸಿ ಒತ್ತಾಯಿಸಲಾಗಿತ್ತು. ಸಮಿತಿಯ ಸರ್ವಸದಸ್ಯರ ವತಿಯಿಂದ ಮತ್ತೊಮ್ಮೆ ದಾಂಡೇಲಿಯನ್ನು ತಾಲೂಕನ್ನಾಗಿ ಮಾಡಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಎ.ಆರ್. ಬವಾಜಿ ಹಾಗೂ ಎಸ್.ಜಿ. ಬಿರಾದಾರ ತಿಳಿಸಿದ್ದಾರೆ. ದಾಂಡೇಲಿಯಲ್ಲಿ ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು, ವಿವಿಧ ಸಮಿತಿಗಳು ದಾಂಡೇಲಿಯನ್ನು ತಾಲೂಕನ್ನಾಗಿ ಮಾಡಲು ಒಂದೇ ಧ್ವನಿಯಾಗಿ ಹೋರಾಡಬೇಕೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement