ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ರಾಜಕೀಯ ಇಚ್ಛಾಶಕ್ತಿ ಕೊರತೆ

Parashurama
Updated On : 15 Feb 2013, 12:23 pm

ದಾಂಡೇಲಿ: ತಾಲೂಕು ರಚನೆ ಮಾಡಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣವಾಗಿದೆಯೆಂದು ದಾಂಡೇಲಿ ತಾಲೂಕು ರಚನಾ ಸಮಿತಿ ಅಧ್ಯಕ್ಷ ಅಜಿತ ನಾಯ್ಕ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ದಾಂಡೇಲಿ ತಾಲೂಕು ಆಗಬೇಕೆಂದು ನಗರದ ನಾಗರಿಕರು ಹೋರಾಟ ನಡೆಸಿದ್ದಾರೆ. ಸರ್ಕಾರ ನೂತನ 43 ತಾಲೂಕುಗಳ ಘೋಷಣೆ ಮಾಡಿದೆ. ಆದರೆ ದಾಂಡೇಲಿ ಹೆಸರು ಕೈಬಿಟ್ಟಿದ್ದು ಸ್ಪಷ್ಟವಾಗಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಅಪಾದಿಸಿದರು. ದಾಂಡೇಲಿ ತಾಲೂಕಾ ಸಮಿತಿ ಪಕ್ಷಾತೀತವಾಗಿ ಹೋರಾಟ ಮಾಡುತ್ತ ಬಂದಿದೆ. ಈ ಹಿಂದೆ ರಾಮಕೃಷ್ಣ ಹೆಗಡೆ ಮಂತ್ರಿಗಳಿದ್ದಾಗಲೂ ಕೂಡ ನಾವು ಹೋರಾಟ ಮಾಡಿ ಮನವಿ ನೀಡಿದ್ದೇವೆ. ಅವರು ಕೂಡ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು ಎಂದು ಅಜೀತ ನಾಯ್ಕ ತಿಳಿಸಿದರು. ರಾಜಕೀಯ ಪಕ್ಷದವರು ಪ್ರಾಮಾಣಿಕವಾಗಿ ನಮ್ಮೊಂದಿಗೆ ಕೈಜೊಡಿಸಿ ವಾಸ್ತಾವಿಕತೆ ಅರಿತು ನಮ್ಮೊಂದಿಗೆ ಹೋರಾಟ ಮಾಡಲಿ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರದ ಹಿರಿಯ ವೈದ್ಯ ಎನ್.ಎ. ಖಾನ್, ಗಜಾನನ ಭಟ್ಟ, ಮುಕುಂದ ಕಾಮತ್, ನಗರದ ಹಿರಿಯ ವ್ಯಾಪರಸ್ಥ ವಿಷ್ಣು ಕಾಮತ್, ಕೋನಾಪುರಿ, ಎಂ.ಆರ್. ನಾಯ್ಕ, ಎಂ.ಎಸ್. ಪೋಕಳೆ, ಎಸ್.ಜಿ. ಕೊಪ್ಪಳ, ಶಬ್ಬೀರ ತಾಡಪತ್ರಿ, ಉಬೇದ ಖಾನ್, ಶೇಣ್ವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement