ಜಿಲ್ಲೆಯಲ್ಲಿ ಶೇ. 69 ಮತದಾನ
ಕಾರವಾರ: ಗುರುವಾರ ನಡೆದ ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಶೇ. 60ರಷ್ಟು ಮತದಾನವಾಗಿದೆ. ಹಳಿಯಾಳದಲ್ಲಿ ಅತಿ ಹೆಚ್ಚು ಅಂದರೆ ಶೇ. 80.21ರಷ್ಟು ಮತದಾನವಾಗಿದ್ದರೆ, ಭಟ್ಕಳದಲ್ಲಿ ಅತಿ ಕಡಿಮೆ ಅಂದರೆ ಶೇ. 53.08ರಷ್ಟು ಮತದಾನವಾಗಿದೆ.
ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಡೆದ ಮತದಾನದ ಶೇಕಡಾವಾರು ವಿವರ ಹೀಗಿದೆ.
ಕಾರವಾರ ನಗರಸಭೆ ಚುನಾವಣೆಯಲ್ಲಿ ಶೇ. 62.44ರಷ್ಟು ಮತದಾನವಾಗಿದೆ. ಶಿರಸಿ ನಗರಸಭೆ ಚುನಾವಣೆಯಲ್ಲಿ ಶೇ. 68.16ರಷ್ಟು ಮತದಾನವಾಗಿದೆ. ದಾಂಡೇಲಿ ನಗರಸಭೆ ಚುನಾವಣೆಯಲ್ಲಿ ಶೇ. 68.40ರಷ್ಟು ಮತದಾನವಾಗಿದೆ. ಕುಮಟಾ ಪುರಸಭೆ-ಶೇ. 72.67, ಭಟ್ಕಳ ಪುರಸಭೆ-ಶೇ. 53.08, ಅಂಕೋಲಾ ಪಟ್ಟಣ ಪಂಚಾಯಿತಿ- ಶೇ.72.23, ಹೊನ್ನಾವರ ಪಟ್ಟಣ ಪಂಚಾಯಿತಿ-ಶೇ.71.25, ಸಿದ್ದಾಪುರ ಪಟ್ಟಣ ಪಂಚಾಯಿತಿ- ಶೇ. 75.66, ಯಲ್ಲಾಪುರ ಪಟ್ಟಣ ಪಂಚಾಯಿತಿ-ಶೇ. 70.70, ಮುಂಡಗೋಡ ಪಟ್ಟಣ ಪಂಚಾಯಿತಿ-ಶೇ. 75.09, ಹಳಿಯಾಳ ಪಟ್ಟಣ ಪಂಚಾಯಿತಿ-ಶೇ. 80.21ರಷ್ಟು ಮತದಾನವಾಗಿದೆ.
ಹೊನ್ನಾವರ: ಶೇ. 71.25 ಮತದಾನ
ಹೊನ್ನಾವರ ಪಪಂಗೆ ನಡೆದ ಚುನಾವಣೆಯಲ್ಲಿ ಶೇ. 71.25ರಷ್ಟು ಮತದಾನವಾಗಿದೆ. ಬೆಳಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಸಂಜೆ ವೇಳೆ ಬಿರುಸುಗೊಂಡಿತು. ಪ್ರಭಾತನಗರ ವಾರ್ಡ್ನಲ್ಲಿ 89 ವರ್ಷದ ಸುಶೀಲಾಬಾಯಿ ಡಿ. ಮೇಸ್ತ ಕುಟುಂಬದವರ ನೆರವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಹೊನ್ನಾವರ ಪಪಂ ವ್ಯಾಪ್ತಿಯ 13799 ಮತದಾರರಲ್ಲಿ 4814 ಪುರುಷರು ಮತ್ತು 5018 ಮಹಿಳೆಯರು ಸೇರಿದಂತೆ 9832 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ವಾರ್ಡ್ ನಂ.10ರಲ್ಲಿ ಅತಿ ಹೆಚ್ಚು (ಶೇ.79.79) ಮತದಾನವಾಗಿದ್ದು, ವಾರ್ಡ್ ನಂ.14ರಲ್ಲಿ ಅತಿ ಕಡಿಮೆ (ಶೇ. 57.70) ಮತದಾನವಾಗಿದೆ.
ದಾಂಡೇಲಿ ನಗರಸಭೆ: ದಾಂಡೇಲಿ ನಗರಸಭೆಯ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 68.38 ಮತದಾನವಾಗಿದೆ. 31 ವಾರ್ಡ್ಗಳ ಪೈಕಿ 8ನೇ ವಾರ್ಡ್ನಲ್ಲಿ ಗರಿಷ್ಠ ಶೇ. 80 ಮತದಾನವಾಗಿದೆ. 16ನೇ ವಾರ್ಡ್ನಲ್ಲಿ ಕನಿಷ್ಠ (ಶೇ. 55) ಮತದಾನ ದಾಖಲಾಗಿದೆ. ಒಟ್ಟು 25,277 ಮತದಾರರು ಹಕ್ಕು ಚಲಾಯಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.