ಪ್ರಮೋದ ಹೆಗಡೆ ದೇಶಪಾಂಡೆಯ ವಕ್ತಾರ: ಪಿ.ಜಿ. ಭಟ್ಟ ಆರೋಪ
ಯಲ್ಲಾಪುರ: ಪ್ರಮೋದ ಹೆಗಡೆ ಜೆಡಿಎಸ್ ಬೆಳೆಸಿ, ಕಟ್ಟಿದ್ದಕ್ಕಿಂತಲೂ ತಮ್ಮ ಪ್ರಚಾರಕ್ಕಾಗಿ ಬಳಸಿಕೊಂಡಿದ್ದೇ ಅಧಿಕ. ಎಐಸಿಸಿ ಸದಸ್ಯ ನಿವೇದಿತ ಆಳ್ವ ಯಲ್ಲಾಪುರಕ್ಕೆ ಬಂದಾಗಲೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಉಪಸ್ಥಿತಿ ಇರಲಿಲ್ಲ. ಅವರನ್ನು ಹೊರಗಿರಿಸಿ ಕಾರ್ಯಕ್ರಮ ನಡೆಸಿರುವ ಪ್ರಮೋದ ಹೆಗಡೆ, ಕಾಂಗ್ರೆಸ್ನ ವಕ್ತಾರರಲ್ಲ. ದೇಶಪಾಂಡೆಯ ವಕ್ತಾರರು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಪಿ.ಜಿ. ಭಟ್ಟ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನ್ನು ಮೂರನೇ ಸ್ಥಾನಕ್ಕೆ ತಳ್ಳಿರುವ ಪ್ರಮೋದ ಹೆಗಡೆ, ಮತದಾರರಿಗೆ ಬೇಕಂತಲೇ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಪ್ರಚಾರಕ್ಕಾಗಿ ಹಾಗೂ ನಾಯಕರನ್ನು ಓಲೈಸಲು ಪತ್ರಿಕಾಗೋಷ್ಠಿ ನಡೆಸಿ, ಪ್ರಚಾರಗಿಟ್ಟಿಸಿಕೊಳ್ಳುವ ತಂತ್ರ ನಡೆಸಿದ್ದಾರೆ. ಈವರೆಗೆ ಬೇಡ್ತಿ ನೀರಿನ ಕುರಿತು ಚಕಾರ ಎತ್ತದ ಪ್ರಮೋದ ಹೆಗಡೆ, ಜೆಡಿಎಸ್ ಪ್ರಣಾಳಿಕೆಯ ಅಂಶಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ಗೆ ಅಪಾರ ಜನಬೆಂಬಲ ದೊರೆಯುತ್ತಿದ್ದು, ಅಲ್ಪಸಂಖ್ಯಾತ ಕಾಂಗ್ರೆಸ್ ಮುಖಂಡ ಫೀರಸಾಬ ಹಾಗೂ ಶಬ್ಬೀರ್ ಶೇಖ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ 12ಕ್ಕಿಂತ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆ ಇದೆ ಎಂದರು. ಜೆಡಿಎಸ್ ಮುಖಂಡ ಅನಿಲಕುಮಾರ ಮಾತನಾಡಿ, 2003ರ ಚುನಾವಣೆಯ ಸಮೀಕ್ಷೆಯಲ್ಲಿ ಜೆಡಿಎಸ್ 2-3 ಸ್ಥಾನ ಗಳಿಸುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಜೆಡಿಎಸ್ 58 ಸ್ಥಾನ ಗೆದ್ದುಕೊಂಡಿತು ಎಂದರು. ಈ ಸಂದರ್ಭದಲ್ಲಿ ರವಿ ಭಟ್ಟ ಬರಗದ್ದೆ, ಶಕೀಲ್ ಅಹಮ್ಮದ್, ಬಿಂದು ಮಾಧವನ್, ಸೀತಾ ಸಿದ್ದಿ, ಫೀರಸಾಬ್, ನರಸಿಂಹ ಗಣಪೂಮನೆ, ಶ್ಯಾಮ, ರವಿಚಂದ್ರ ನಾಯ್ಕ ಮುಂತಾದವರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.