ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಸ್ವಾವಲಂಬನೆ ದಿಸೆಯಲ್ಲಿ ಮಹಿಳೆ

Parashurama
Updated On : 10 Mar 2013, 12:34 pm

ಶಿರಸಿ:  ಪುರುಷ ಪ್ರಧಾನವಾದ ಭಾರತದಲ್ಲಿ ವಿಶೇಷವಾದ ಕಾನೂನಿನ ಬೆಂಬಲದಿಂದ ಇಂದು ಮಹಿಳೆಯರು ಅಬಲೆಯರಲ್ಲ. ಕಾನೂನಿನ ಮೂಲಕ ಹಕ್ಕನ್ನು ಪಡೆದು ಸ್ವಾವಲಂಬನೆ ದಿಸೆಯಲ್ಲಿ ಸಾಗುತ್ತಿದ್ದಾರೆ ಎಂದು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಕಿಣ್ಣಿಕೇರಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಾಲೂಕು ಕಾನೂನು ಸೇವೆಗಳ ಸಮಿತಿ ಶಿರಸಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ಥಳೀಯ ಬಾಲಮಂದಿರದಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಮಹಿಳೆ ಮೂಢನಂಬಿಕೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಳು. ಆದರೆ ಇಂದು ಮಹಿಳೆ ಕಾನೂನು ಮತ್ತು ಅಕ್ಷರ ಜ್ಞಾನದಿಂದ ಜಾಗೃತಳಾಗುತ್ತಿದ್ದಾಳೆ. ಆದಾಗ್ಯೂ ಭ್ರೂಣಹತ್ಯೆ ನಿಯಂತ್ರಿಸುವ ದಿಸೆಯಲ್ಲಿ ಹೆಚ್ಚಿಗೆ ಒತ್ತು ನೀಡುವುದು ಆವಶ್ಯಕವೆಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ಎನ್.ಆರ್., ಇಂದಿನ ಮಹಿಳೆಗೆ ಕಾನೂನಾತ್ಮಕ ರಕ್ಷಣೆ ಕೊಡುವಲ್ಲಿ ಯಶಸ್ವಿಯಾದರೂ ಸಹಿತ ಅಲ್ಲಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಜರುಗುತ್ತಿರುವುದು ವಿಷಾದಕರ. ಕಾನೂನು ಮತ್ತು ಸರ್ಕಾರದ ಸವಲತ್ತಿನಿಂದ ಮಹಿಳೆ ಇಂದು ಪುರುಷರ ಸರಿಸಮಾನರಾಗಿ ಬೆಳೆಯುತ್ತಿದ್ದಾರೆ. ಇಂದಿನ ಮಹಿಳೆಗೆ ಮೂಲಭೂತ ಹಕ್ಕನ್ನು ಹಾಗೂ ರಕ್ಷಣೆ ನೀಡುವ ಜವಾಬ್ದಾರಿ ಸಮಾಜದ್ದಾಗಿದೆ ಎಂದು ಹೇಳಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿದ್ರಾಮ ಟಿ.ಪಿ., ಆರ್ಥಿಕ ಹಾಗೂ ಶೋಷಣೆಗೆ ಒಳಗಾಗಿರುವಂಥ ಮಹಿಳೆಗೆ ಕಾನೂನು ಸೇವಾ ಸಮಿತಿ ನೆರವನ್ನು ನೀಡುತ್ತದೆ. ಕಾನೂನು ಅಜ್ಞಾನದಿಂದ ಮಹಿಳೆಗೆ ಅನ್ಯಾಯವಾಗದ ರೀತಿಯಲ್ಲಿ ಕಾನೂನು ಸೇವಾ ಸಮಿತಿ ಕರ್ತವ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಮಹಿಳಾ ಕಾನೂನು ಕುರಿತು ಬಸವರಾಜ ದೊಡ್ಮನಿ ವಿಷಯ ಮಂಡನೆ ಮಾಡಿದರು. ಸಮಾಜಕಲ್ಯಾಣ ಅಧಿಕಾರಿ ಸಫಿಯಾ ಖಾನ ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments