ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಇಂದು ಯಕ್ಷಗಾನ ಪ್ರದರ್ಶನ

Parashurama
Updated On : 17 Mar 2013, 12:10 pm

ಕಾರವಾರ: ಅಂಕೋಲಾದ ವೆಂಕಟರಮಣ ದೇವಾಲಯದ ರಥೋತ್ಸವ ಅಂಗವಾಗಿ ದೇವಾಲಯದ ಬಳಿ ಭಾನುವಾರ ಸಂಜೆ 6.30ರಿಂದ 9.30ರ ತನಕ ಕೋಮಾರಪಂತ ಸಮಾಜ ಅಂಕೋಲಾ ಇವರಿಂದ ಶೈಮಿನಿ ಶಪಥ ಯಕ್ಷಗಾನ ಪ್ರದರ್ಶನ ನಡಯಲಿದೆ. ಹಿಮ್ಮೇಳದಲ್ಲಿ ಕೃಷ್ಣ ಮಾಸ್ಕೇರಿ ಹಾಗೂ ಸಂಗಡಿಗರು ಪಾಲ್ಗೊಳ್ಳಲಿದ್ದು, ಪಾತ್ರಧಾರಿಗಳಾಗಿ ನಾರಾಯಣ ನಾಯ್ಕ, ಸಂಜಯ ನಾಯ್ಕ, ವಸಂತ ನಾಯ್ಕ, ಆನಂದು ನಾಯ್ಕ, ಪ್ರೀತಮ್ ನಾಯ್ಕ, ರತ್ನಾಕರ ನಾಯ್ಕ, ದಯಾ ನಾಯ್ಕ, ಮಹೇಶ ವಂದಿಗೆ, ಪದ್ಮರಾಜ ಅಲಗೇರಿ, ತುಕಾರಾಮ ಬೇಲೆಕೇರಿ ಹಾಗೂ ಸಂಗಡಿಗರು ಭಾಗವಹಿಸಲಿದ್ದಾರೆ ಎಂದು ದೇವಾಲಯದ ಧರ್ಮದರ್ಶಿ ಆರ್.ಎನ್. ನಾಯಕ ತಿಳಿಸಿದ್ದಾರೆ.
ಇಂದು ಹಾಸ್ಯ ಸಂಜೆ ಕಾರ್ಯಕ್ರಮ
ಶಿರಸಿ: ಕೆನರಾ ವೃತ್ತ ಅರಣ್ಯ ಇಲಾಖಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನದ ಸಹಾಯಾರ್ಥ ಹೆಸರಾಂತ ಕಲಾವಿದೆ ಸುಧಾ ಬರಗೂರು ಹಾಗೂ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಮಾ. 17ರಂದು ಸಂಜೆ 6 ಗಂಟೆಗೆ ನಗರದ ತೋಟಗಾರರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಮನಾಥ ರಥೋತ್ಸವ ಇಂದು
ಜೋಯಿಡಾ: ತಾಲೂಕಿನ ರಾಮನಗರ ರಾಮನಾಥ ದೇವಸ್ಥಾನದ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮಾ. 17ರಂದು ಮಧ್ಯಾಹ್ನ ಮಹಾರಥೋತ್ಸವ ನಡೆಯಲಿದೆ. ಸೂಪಾದ ಗ್ರಾಮದೇವರಾದ ರಾಮಲಿಂಗೇಶ್ವರನನ್ನು ಸೂಪಾ ಮುಳುಗಡೆಯ ನಂತರ ರಾಮನಗರದಲ್ಲಿ ಪ್ರತಿಷ್ಠಾಪಿಸಿ ಪ್ರತಿವರ್ಷ ಗ್ರಾಮಸ್ಥರು ಮಹಾರಥೋತ್ಸವ ನೆರವೇರಿಸಿಕೊಂಡು ಬಂದಿದ್ದಾರೆ. ಜಾತ್ರೆ ಒಂದು ವಾರ ಕಾಲ ನಡೆಯಲಿದೆ. ಒಟ್ಟು ಮೂರು ರಥಗಳನ್ನು ಜಾತ್ರೆಯಲ್ಲಿ ಬಳಸುವುದು ವಿಶೇಷ. ಕೊನೆಯ ದಿನವಾದ ಮಾ. 17ರಂದು ಮಹಾರಥೋತ್ಸವ ನಡೆಯಲಿದೆ. ಆರ್ಕೆಸ್ಟ್ರಾ, ನಾಟಕ, ಹೆಸರಾಂತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಮಹಿಳಾ ದಿನಾಚರಣೆ
ಕಾರವಾರ: ಪಣಜಿಯ ಗೋವಾ ಕನ್ನಡ ಸಮಾಜದ ಆಶ್ರಯದಲ್ಲಿ ಮಾ. 17ರಂದು ಮಹಿಳಾ ದಿನಾಚರಣೆ ನಡೆಯಲಿದೆ. ಪಣಜಿಯ ಪಾಟೊದಲ್ಲಿರುವ ಗೋವಾ ರಾಜ್ಯ ವಸ್ತು ಸಂಗ್ರಹಾಲಯದ ಸಭಾಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಪಣಜಿ ಮಹಾನಗರ ಪಾಲಿಕೆ ಅಧ್ಯಕ್ಷೆ ವೈದೇಹಿ ನಾಯ್ಕ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮಡಗಾಂವ್‌ನ ಚೌಗುಲೆ ಕಾಲೇಜಿನ ಗ್ರಂಥಪಾಲಕಿ ಡಾ. ಎಂ.ಪಿ. ಶಿವಳ್ಳಿ ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ಗೃಹಿಣಿ ಹಾಗೂ ಉದ್ಯೋಗಿ ಮಹಿಳೆ ವಿಷಯದ ಮೇಲೆ ಚರ್ಚೆ ಏರ್ಪಡಿಸಲಾಗಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಅರುಣಕುಮಾರ ಹಾಗೂ ಸಹ ಕಾರ್ಯದರ್ಶಿ ಗೀತಾ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments