ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉತ್ತರ ಕನ್ನಡ

ಜನರಲ್ಲಿ ಶ್ರದ್ಧೆ-ಭಕ್ತಿ ನಶಿಸುತ್ತಿದೆ

Parashurama
Updated On : 17 Mar 2013, 12:09 pm

ಮುಂಡಗೋಡ: ಜನರಲ್ಲಿ ನಿಜವಾದ ಶ್ರದ್ಧೆ-ಭಕ್ತಿ ನಶಿಸಿ ಹೋಗುತ್ತಿರುವುದರಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಗೊಟಗೊಡಿಕೊಪ್ಪ ಧರ್ಮಭೂಮಿ ಮುಕ್ತಿ ಮಠದ ಧರ್ಮಶ್ರೀ ತಪೋರತ್ನ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಶನಿವಾರ ತಾಲೂಕಿನ ಗೊಟಗೊಡಿಕೊಪ್ಪ ಮುಕ್ತಿಮಠದ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಕಟ ಬಂದಾಗ ಮಾತ್ರ ವೆಂಕಟರಮಣ ಎಂಬಂತೆ ಪೂಜೆ ಸಲ್ಲದು. ಮನಸ್ಸು ಶುದ್ಧವಾಗಿದ್ದರೆ ಮಾತ್ರ ಭಗವಂತ ಒಲಿಯುತ್ತಾನೆ. ಮನಕ್ಕೆ ಅಂಜಿ ಭಕ್ತಿ ಸಮರ್ಪಿಸಬೇಕು. ಮುಪ್ಪಾಗುವ ಮುನ್ನ ಶರಣರ ಸಂಗಮವನ್ನು ಸೇರಬೇಕು. ಸುಂದರ ಸಮಾಜ ನಿರ್ಮಾಣವಾಗ ಬೇಕಾದರೆ ಪ್ರತಿಯೊಬ್ಬರೂ ನಿಸ್ವಾರ್ಥ ಮನೋಭಾವ ಹೊಂದಬೇಕು. ಸರ್ವೋ ಜನಾ ಸುಖಿನೋ ಭವಂತು ಎಂಬ ಮಾತು ಬಿಂಬಿತವಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಧರ್ಮದ ಕೊರತೆಯಿಂದ ಕಾಲ ಕಾಲಕ್ಕೆ ಮಳೆ, ಬೆಳೆಯಾಗದೆ ತೀವ್ರ ಸಮಸ್ಯೆ ಎದುರಿಸುತ್ತಿದ್ದೇವೆ. ಸಂಕಷ್ಟ ಬಂದಾಗ ಮಾತ್ರ ದೇವರ ಮೊರೆ ಹೋಗುವ ಬದಲು ಸದಾ ಧರ್ಮಕ್ಕೆ ಮಾರು ಹೋಗಬೇಕಿದೆ ಎಂದು ಹೇಳಿದರು.
ಹನುಮಾಪುರ ಕಾಳಿಕಾ ದೇವಿ ಮಠದ  ಸದಾನಂದ ಶಿವಾಚಾರ್ಯ ಶ್ರೀ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೂಲಿಕಟ್ಟಿ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಶ್ರೀ, ಹಿರೇಮುನಳ್ಳಿ ಶಾಂಡಿಲೇಶ್ವರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಶ್ರೀ, ಗೊಟಗೊಡಿಕೊಪ್ಪ ಶಿವಮೂರ್ತಯ್ಯಾ ಸುರಗಿಮಠ ಶ್ರೀ, ಲೋಕೋಪಯೋಗಿ ಇಲಾಖೆ ನಿವೃತ್ತ ಅಧಿಕ್ಷಕ ಸಿ.ಪಿ. ಪಾಟೀಲ, ತಾಪಂ ಸದಸ್ಯೆ ಶಾಮಲಾ ಹೆಗಡೆ, ಗ್ರಾಪಂ ಅಧ್ಯಕ್ಷೆ ಶಕ್ರವ್ವ ಪನ್ನೇರ, ಮಹೇಶ ಹೊಸಕೊಪ್ಪ, ಕೃಷ್ಣ ಭರತ್ನಳ್ಳಿ, ಆರ್.ಜಿ. ನಾಯ್ಕ, ಸಿದ್ದಪ್ಪ ಬಂಕಾಪುರ ಇದ್ದರು. ವೀರೇಂದ್ರ ಪಾಟೀಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments