ಕಾಳಿದಾಸ, ರಾಮಕೃಷ್ಣನಗರ, ಮೈಸೂರು
ಹೃದಯದ ಮಾತು ಮೇಲೋ, ಮನಸಿನ ಮಾತು ಮೇಲೋ?
ಯಾರ ಹೃದಯ, ಯಾರ ಮನಸು ಎಂಬುದರ ಮೇಲೆ ಅವಲಂಬಿಸಿರುತ್ತದೆ!
ಮಾಗಡಿ ಶ್ರೀನಿವಾಸ್, 9902797767
ಹಗರಣಗಳಿಗೆ ಹೋದ ಮಾನ, ಅಕ್ಕಿ ಕೊಟ್ರೆ (2 ರುಪಾಯಿಗೆ) ಬರುತ್ತಾ?
ಮಾನ ಬಂದೇನು ಪ್ರಯೋಜನ? ಬರಬೇಕಿರುವುದು ಅಧಿಕಾರ!
ವಿ. ಹೇಮಂತಕುಮಾರ್, 9035992900
ಇಲ್ಲೊಬ್ಬಳು ಒಂದು ಪ್ಲಸ್ ಒಂದು ಮೂರು ಅಂತಿದ್ದಾಳಲ್ಲ, ಹೇಗೆ?
ಹೇಗೆ ಅಂತ ನಾನವಳಿಂದ ವಿವರವಾಗಿ ತಿಳಿದುಕೊಂಡ ಮೇಲೆ ನಿನಗೆ ಹೇಳಿದರೆ ಸಾಕಲ್ವಾ?
ನೇರಲಗುಡ್ಡ ಶಿವಕುಮಾರ್, ಶಿರಾ 9480343742
ಕ್ಯಾರೆಕ್ಟರ್‌ಗೂ ಕಾಂಟ್ರವರ್ಸಿಗೂ ಇರುವ ಸಾಮ್ಯತೆ ಏನು?
ಕೆಲವರ ಕ್ಯಾರೆಕ್ಟರ್ರೇ ಕಾಂಟ್ರೋವರ್ಸಿ!
ಶಿಲ್ಪಿ ರಮೇಶ್ ಸಂತೇಮಾಳ, ಬನ್ನೂರು
ಸ್ನೇಹಕ್ಕೂ ಸೈ, ಪ್ರೇಮಕ್ಕೂ ಸೈ ಅಂದವಳು ಆಮೇಲೆ ಕಾಣಿಸಲೇ ಇಲ್ಲ?
ಇನ್ನೆಲ್ಲೋ ಸೈ ಎನ್ನುವುದಕ್ಕೆ ಹೋಗಿದ್ದಿರಬಹುದು!
ಬಾಣಭಟ್ಟ