ಬದುಕಿರುವವರಿಗೆ ಬದುಕಿರುವವರೆಗೆ ಕಾಡುವ ವಿಷಯ
ಹುಟ್ಟಿದವರೆಲ್ಲ ಸಾಯಲೇಬೇಕು, ಅದು ನನ್ನನ್ನು ಮಾತ್ರ ಬಿಡಬೇಕು
ನಾವು ಬಯಸದ ಏಕೈಕ ಹುದ್ದೆ ಮತ್ತು ಪ್ರಶಸ್ತಿ
ಹಾವು ಕಂಡಾಗ ಓಡುವುದು ಹಾವಿನ ಭಯದಿಂದಲ್ಲ, ಸಾವಿನ ಭಯದಿಂದ
ಬದುಕಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿದು
ಜಾಗತಿಕ ಕೊಲೆಗಾರ
ನಮ್ಮನ್ನು ಅನುಸರಿಸುವ ಜೊತೆಗಾರ
ನಮ್ಮೊಳಗೇ ಬೆಳೆಯುವ ನಮ್ಮ ಶತ್ರು
ಸಾವನ್ನು ನಾವು ಮರೆತರೂ ಸಾವು ನಮ್ಮನ್ನು ಮರೆಯುವುದಿಲ್ಲ
ಕರೆಯದೇ ಬರುವ ನೆಂಟ
ಭೀಷ್ಮ ಇದಕ್ಕೂ ಮುಹೂರ್ತ ಹುಡುಕಿದ್ದ
ಸಂಸಾರವೆಂಬ ಕುಣಿಯಿಂದ ಏಳಲು ಕೆಲವರು ಕುಣಿಕೆಯೇ ಪರಿಹಾರವೆಂದು ಭಾವಿಸಿದ್ದಾರೆ
ಯಾಕೆ ಹುಟ್ಟಿದ್ದೇವೆಂದು ತಿಳಿಯುವ ತನಕ ನಿತ್ಯ ಸಾಯುತ್ತಿರುತ್ತೇವೆ.
-ವಿಶ್ವನಾಥ ಸುಂಕಸಾಳ
ಢ್ಝಝಢಿಛಡ್ಡಟ್ಞಿಛಡಛಟಅಣಝ್ಟ್ಟ.್ಛ್ಟಟ