ನಮ್ಮೆಲ್ಲ ಗುರಿ ಈಡೇರಿಕೆಗಿದು ಅಡಿಪಾಯ
ವ್ಯಯಕ್ಕಿಂತ ಹೆಚ್ಚಿಗೆ ಇರಬೇಕಾದದ್ದು
ಆಯ ತಪ್ಪಿದರೆ ಅಪಾಯ; ಆದಾಯದ ವಿಷಯದಲ್ಲಿ
ದಾಯಾದಿಗಳು ದಾಯಭಾಗವನ್ನು ಕೇಳೋದೇ ಆದಾಯವನ್ನು ಹೆಚ್ಚಿಸಿಕೊಳ್ಳೋದಕ್ಕೆ
ಪ್ರತಿ ತಿಂಗಳೂ ಇದರ ವ್ಯಯವೇ ಜಾಸ್ತಿ
ಆದ ಆಯ
ಟ್ಯಾಕ್ಸ್ ಕಟ್ಟಲು ಮೂಲ ಕಾರಣ
ಇದು ಚೆನ್ನಾಗಿದ್ದರೆ ಮಾತ್ರ ನಿಮಗೆ ಹುಡುಗಿ ಸಿಗುತ್ತಾಳೆ
ಕೈ ತುಂಬಾ ಆದಾಯವಿದ್ದವಗೆ ಕಾಲುಬುಡ ಕಾಣುವುದಿಲ್ಲ
ಹೆಚ್ಚು ಆದಾಯವೇ ಹೆಚ್ಚು ಕೊಳ್ಳುಬಾಕರನ್ನಾಗಿಸಿ ವ್ಯಾಪಾರಿಗಳ ಆದಾಯ ಹೆಚ್ಚಿಸಲು ಕಾರಣವಾಗುತ್ತದೆ
ಕಮ್ಮಿ ಇನ್- ಕಮ್ಮಿನವಗೆ ಬೊಮ್ಮನೂ ಒಲಿಯಲಾರ
ಸಾಲದು ರೀ ಎಂದು ಹೆಂಡತಿಯಿಂದ ಆಕ್ಷೇಪಿಸಲ್ಪಡುವ ಸ್ಯಾಲರೀ
ಆಯಾ ಗಯಾ ಎಂಬಂಥ ಸ್ವಭಾವದ್ದು ಈ ಆದಾಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com