ಮನು ವಿ. ದಾವಣಗೆರೆ, 9739259427
ಹಕ್ಕಿಗಳ ಹಾಗೆ ಮನುಷ್ಯರಿಗೂ ರೆಕ್ಕೆಗಳಿದ್ದರೆ ಏನಾಗುತ್ತಿತ್ತು?
ರೆಕ್ಕೆ ಕತ್ತರಿಸಿ ಬದಿಗೆ ಕೂರಿಸ್ತೇನೆ ನೋಡು ಅಂತ ಬಯ್ಯಬಹುದಿತ್ತು!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
'ಹೆಂಡತಿ' ಸಹವಾಸಕ್ಕೂ 'ಹೆಂಡದ' ಸಹವಾಸಕ್ಕೂ ಇರುವ ವ್ಯತ್ಯಾಸವೇನು?
ಹೆಂಡ ಕುಡಿದು ಮಲಗಿದರೆ ಮುಗೀತು. ಹೆಂಡತಿ ಮಲಗಿ ಎದ್ದಮೇಲೂ ಇರ್ತಾಳೆ.
ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ಹುಟ್ಟುಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸುವವರಿಗೆ ನಿಮ್ಮ ಸಲಹೆಯೇನು?
ಶ್ರಾದ್ಧದ ಖರ್ಚಿಗೂ ಕೊಂಚ ಉಳಿಸಿರಿ!
ಆರೀಫ್ (ಅಪ್ಪು), ದಾವಣಗೆರೆ, 9964280609
ಜಡೆ ಕಟ್ಟೋ ಆಂಟೀರು-ಹುಡುಗೀರೇ ಕಾಮದ ಉಯ್ಯಾಲೆ ಆಡಲು ಬಯಸುವಾಗ, ತೊಡೆ ತಟ್ಟೋ ನಾನು ಆಡಲು ಮುನ್ನುಗ್ಗಬಹುದಲ್ಲವೇ?
ಎದ್ದ ಮೇಲೆ ಅತ್ಯಾಚಾರವಾಯಿತು ಅಂದರೆ ಜೈಲಿಗೆ ಹೋಗುವುದು ನೀನೇ ಎಂಬುದನ್ನು ಸೇಫ್ಟಿಗೆ ತಿಳ್ಕೊಂಡಿರು!
ಜಾನು ದಾವಣಗೆರೆ,
ಕೆಲವು ಜಯಂತಿಗಳನ್ನು ಮಾಡುವುದರಿಂದ ಯಾರಿಗೆ ಲಾಭ?
ಜಯಂತಿ ಅವರಿಗಂತೂ ಯಾವುದೇ ಲಾಭವಿಲ್ಲ!
-ಬಾಣಭಟ್ಟ