ಕಾಳಿಹುಂಡಿ ಶಿವಕುಮಾರ್, ಮೈಸೂರು 9844883581
ಈ ದೇವರು ಸರ್ವಾಂತರ್ಯಾಮಿ, ಪ್ರೀತಿ?
ಗುಪ್ತಗಾಮಿ!
ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ 9972448183
ದೃಶ್ಯಮಾಧ್ಯಮದ ವರದಿಗಾರರು ಪ್ರತಿಯೊಂದು ವಾಕ್ಯವನ್ನೂ 'ಹೇಳಬಹುದು, ಹೇಳಬಹುದು' ಎಂದೇಕೆ ಹೇಳುತ್ತಾರೆ?
ಹೇಳಲಾಗದ ಸುದ್ದಿಯನ್ನು ಹೇಳುತ್ತಿದ್ದೇನೆ ಎಂಬ ಭಾವನೆಯಿಂದ ಹಾಗೆ ಹೇಳುತ್ತಿರಬಹುದಾ?
ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಯ ಸವಿಯನ್ನು ಸವಿಯಲು ಮನಸ್ಸು ಹಸಿಯಾಗಿರಬೇಕೋ, ಬಿಸಿಯಾಗಿರಬೇಕೋ?
ನೀನು ಹೇಗೆ ಕಸಿ ಮಾಡುತ್ತೀಯಾ ಎಂಬುದನ್ನು ಅವಲಂಬಿಸಿದೆ!
ಮಾಗಡಿ ಶ್ರೀನಿವಾಸ್, 9902797767
ಬದುಕಿದ್ದಾಗ ಬೈದಾಡುವ ಜನ ಸತ್ತಾಗ ಅಳುವುದೇಕೆ ಸರ್?
ಬೈದಾಡುವ ಅವಕಾಶ ತಪ್ಪಿ ಹೋಯಿತಲ್ಲ ಎಂಬ ಸಂಕಟ!
ವಿ. ಹೇಮಂತಕುಮಾರ್, 9035992900
ಲಿಪ್‌ಸ್ಟಿಕ್‌ನ ಕೆಂಪಿಗೂ ತಾಂಬೂಲದ ಕೆಂಪಿಗೂ ವ್ಯತ್ಯಾಸವೇನು?
ಒಂದನ್ನು ತಾವೇ ಮೆತ್ತಿಕೊಳ್ಳಬೇಕು, ಇನ್ನೊಂದು ಅದೇ ಮೆತ್ತಿಕೊಳ್ಳುತ್ತದೆ!
-ಬಾಣಭಟ್ಟ