ಕೆಲವರ ಕಿವಿ ಮತ್ತು ಬಾಯಿಇರುವುದೇ ಇದಕ್ಕೋಸ್ಕರ
ಬೇರೆಯವರ ಮನೆಯ ರಾಡಿ ಮತ್ತೊಬ್ಬರ ಕಿವಿಗೆ ದಾಟಿಸುವುದೇ ಚಾಡಿ
ಚಾ ಕುಡಿವಾಗ ಹೇಳಿದ ಪರಚ್ಛಿದ್ರ
'ಯಾರಿಗೂ ಹೇಳಬೇಡ' ಎಂಬುದೇ ಇದರ ಸಬ್ ಟೈಟಲ್
ಕಿವಿ ಕಚ್ಚುವಿಕೆ
ವಾಯುಪುತ್ರನಿಗಿಂತ ಇದರ ವೇಗ ಜಾಸ್ತಿ
ಕೆಲಸವಿಲ್ಲದವರ ಕೆಲಸ
ಫಿಟ್ಟಿಂಗ್ ಇಡುವ ಮಾಧ್ಯಮ
ಹಾರುತ್ತದೆ ರೆಕ್ಕೆಯಿಲ್ಲ, ಕಿವಿಯ ಬಳಿ ಇದ್ದರೂ ಆಭರಣವಲ್ಲ,
ಬೇರೆಯವರ ಕಾಲು ಬುಡದ ಕಸ ಕೆದರುವಿಕೆ
ಕಟ್ಟೆ ಪುರಾಣದ ಪ್ರಥಮಾಧ್ಯಾಯ
ಹೊತ್ತು ಹೋಗದವರ ಹೊತ್ತು ಹೊತ್ತಿನ ತುತ್ತು
ಹಾಗಂತೆ ಹೀಗಂತೆ ಎಂಬ ಅಂತೆ ಕಂತೆಗಳ ಸಂತೆ
ಚಾವಡಿಯಲ್ಲಿ ಕೇಳಿ ಬರುವ ಶಬ್ದ
ಪಕ್ಕದ್ಮನೆ ಸೀತಮ್ಮ ಆಚೆ ಮನೆ ರಂಗಮ್ಮಗೆ ಹೇಳಿದ ಈಚೆ ಮನೆಯ ಲಕ್ಷ್ಮಮ್ಮನ ಮಗಳ ಕತೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com