ಮೋದಿ
= ವಿರೋಧಿಗಳ ಭೇದಿಗೆ ಕಾರಣವಾದ ಶಬ್ದ
= ಇವರು ತುಳಿದದ್ದೇ ಹಾದಿ
= ಅಧಿಕಾರ ಗಾದಿಯ ಸಮೀಪವರ್ತಿ ಪದ
= ಈ ಸಲದ ಚುನಾವಣೆಯ ಯಜ್ಞವೇದಿ
= ಮೋಡಿ ಶಬ್ದದ ತದ್ಭವ
= ಭೀಷಣ ಭಾಷಣ ಭೂಷಣ
= ಹದಿ ಹರೆಯದವರ ಐಕಾನ್, ಅಭಿವೃದ್ಧಿಯ ಐಕಾರ್ಡ್
= ಮಂಕುಬೂದಿಯ ವಿರೋಧಿ ಪದ
= ಗಡ್ಡಬಿಟ್ಟರೂ ಆದರ್ಶ ಬಿಡದ ಕೆಲವೇ ಕೆಲವರಲ್ಲಿ ಒಬ್ಬ
= ತನಗೆ ವಿದೇಶದ ವೀಸಾ ಸಿಗದಿದ್ದರೂ ಈ ಸಲ ಹಲವರಿಗೆ ವಿದೇಶಕ್ಕೆ ವೀಸಾ ಕೊಡಿಸಲಿರುವ ವೀಸಾಜಿ
= ನರರ ಇಂದ್ರನಾಗಲು ಕಾದು ಕುಳಿತ ನರೇಂದ್ರ
= ಇವನೊಬ್ಬ ಕೊಲೆಗಾರ, ಸುಳ್ಳ, ವಂಚಕ ಎಂದೆಲ್ಲಾ ಹೊಗಳಿದರೆ ಪ್ರಶಸ್ತಿ ಬರುತ್ತದೆ ಮತ್ತು ಟಿಆರ್‌ಪಿ ಏರುತ್ತದೆ
= ಸರ್ವರನ್ನೂ ಆಳಬಲ್ಲವ, ಸರ್ವಾಧಿಕಾರಿಯೆಂಬ ಅಪವಾದ ಹೊತ್ತವ
= ನೀಚ ಎಂದು ಬೈಯ್ಯುವವರಿಗೂ "ನೀ ಚಾ ಕುಡಿದು ಹೋಗಪ್ಪ" ಎನ್ನುವವ
ವಿಶ್ವನಾಥ ಸುಂಕಸಾಳ
vishwasunkasal@yahoo.com