ರಾಜಕಾರಣಿ
ಇಂದಿನ ಮೂರ್ಖ, ನಾಳೆಯ ರಾಜಕಾರಣಿ
ಜನಾರ್ದನನ ಸೇವೆಯ ಹೆಸರಿನಲ್ಲಿ ಧನಾರ್ಜನೆ ಮಾಡಿಕೊಳ್ಳುವವ
ಚುನಾವಣೆಯ ಋತುವಿನಲ್ಲಿ ್ಣಕಾಣಸಿಗುವ ಜನಾಂಗ
ಮತವೇ ಇವನ ಮತಾಪು
ಭಾಷೆ ಬರದಿದ್ದರೂ ಭಾಷಣ ಬಲ್ಲವ
ಮಾತಿನಿಂದಲೇ ಮತವು, ಮಾತಿನಿಂದಲೇ ಗೆಲುವು, ಮಾತೇ ತನ್ನ ಕಾಯುವ ಮಹಾದೇವ ಎಂದು ಭಾವಿಸಿದವ
ಸತ್ಯ ಪ್ರಾಮಾಣಿಕತೆಗಳ ವಿರುದ್ಧಾರ್ಥಕ
ರಾಜನಾದ ಮೇಲೆ 'ಮಜಾ'ಕಾರಣಿ
ಆಂಗ್ಲರು ತೊಲಗಿದರು, ರಾಜಕಾರಣಿಗಳು ಹುಟ್ಟಿಕೊಂಡರು
ಸಮಾನತೆಯ (ಹರಿದು ಚಿಂದಿ ಮಾಡುವ) ಹರಿಕಾರರು
ಲಕ್ಷ ಬಂಡವಾಳ ಹೂಡಿ ಕೋಟಿ ಕೋಟಿ ಗಳಿಸುವ ಲೂಟಿಕೋರ
ಅಪರೂಪಕ್ಕೆ ಇವರಲ್ಲಿ ಒಳ್ಳೆಯವರೂ ಇರುತ್ತಾರೆ.
ಇವರು ಮನಸ್ಸು ಮಾಡಿದರೆ ಒಳ್ಳೆಯ ಕೆಲಸಗಳನ್ನೂ ಮಾಡಬಲ್ಲರು
ಪರಪ್ಪನ ಅಗ್ರಹಾರಕ್ಕೆ ಸೇರಲು ಇರಬೇಕಾದ ಎಲ್ಲ ಅರ್ಹತೆಗಳನ್ನೂ ಹೊಂದಿರಬೇಕಾದವ
ತನ್ನ ಅಸಾಫಲ್ಯಕ್ಕೆ ವ್ಯಾಜ ಹೇಳುವವ
ವಿಶ್ವನಾಥ ಸುಂಕಸಾಳ
vishwasunkasal@yahoo.com