ಸಂಪಾದಕೀಯ

ಬಕೇಟು

ಬಕೇಟು
    ಪ್ರಶಸ್ತಿ ಗೆಲ್ಲಲೊಂದು ಟಿಕೇಟು
    ಸ್ನಾನ ಮಾಡಲೂ, ಸನ್ಮಾನ ಸ್ವೀಕರಿಸಲೂ ಇದನ್ನು ಹಿಡಿಯಬೇಕಾಗುತ್ತದೆ
    ಕಾರ್ಪೊರೇಷನ್ ನಲ್ಲಿಯಿಂದ ಗಾಳಿಯ ನಡುವೆ ಆಗಾಗ ಹೊರಬೀಳುವ ನೀರಿನ ಹನಿಗಳ ಹಿಡಿಯಲು ಬಳಸುವ ಸಾಧನ
    ನೀನೇ ಚಂದ್ರ, ನೀನೇ ಇಂದ್ರ ಎಂದು ಪುಕ್ಕಟೆ ಸಹಸ್ರನಾಮಾವಳಿಯ ಅರ್ಚನೆಗೆ ಇದನ್ನೇ ಹೋಲಿಸುತ್ತಾರೆ
    ಸಭೆಗಳಲ್ಲಿ ಸ್ವಾಗತಕಾರ ಅತಿಥಿಗಳ ಮನಸೂರೆಗೊಳ್ಳಲು ಹಿಡಿಯುವುದು ಇದನ್ನೇ
    ಇದನ್ನು ಹಿಡಿದವನಿಗೆ ಅಧಿಕಾರ, ಬಹುಮಾನ, ಪ್ರಶಸ್ತಿಗಳು ಬಕೇಟು ತುಂಬಾ ಸಿಗುತ್ತವೆ
    ಸ್ವಾಭಿಮಾನಶೂನ್ಯರು ನಿರಭಿಮಾನಿಗಳ ವಿಷಯದಲ್ಲಿ ಎಸಗುವ ತುಷ್ಟೀಕರಣ
    ಸಾಹಿತಿಗಳಲ್ಲಿ ಎರಡು ವಿಧ. ಬಕೇಟು ಸಾಹಿತಿ ಮತ್ತು ನೈಜ ಸಾಹಿತಿ
    ಪಾದ ನೆಕ್ಕುವ ಕ್ರಿಯೆಯ ಸಮಾನಾರ್ಥಕ ಶಬ್ದ ಬಕೇಟು ಹಿಡಿಯುವಿಕೆ
    ನೀನೇ ರಾಜ, ನೀನೇ ಯುವರಾಜ ಎನ್ನುವಿಕೆ
    ಅಧಿಕಾರ ಗಳಿಕೆಯ ಹಿಂದಿರುವ ವಾಮ ಮಾರ್ಗ
    ತನ್ನ ಬೇಳೆ ಬೇಯಿಸಿಕೊಳ್ಳಲು ಬೇರೆಯವರ ಕಾಲೊತ್ತುವ ಕ್ರಿಯೆ
    ಸರ್ಕಾರೀ ಸ್ಥಾನಮಾನಗಳನ್ನು ಸುಲಭದಲ್ಲಿ ತಂದುಕೊಡುವ ಯಕ್ಷಿಣಿ
    ಕೆಲವರು ತಮ್ಮ ಖುರ್ಚಿ ಗಟ್ಟಿ ಮಾಡಿಕೊಳ್ಳಲು ಯಾವತ್ತೂ ಇದರ ಜೊತೆಯಲ್ಲೇ ಇರುತ್ತಾರೆ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?