ಸ್ವಾರಸ್ಯ

ತಿಪಟೂರು ಚುನಾವಣಾ ಪ್ರಚಾರಕ್ಕೆ ರೈಲಿನಲ್ಲಿ ಆಗಮಿಸಿದ ದೇವೇಗೌಡ

Raghavendra Adiga
ತುಮಕೂರು: ಯಶವಂತಪುರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ನಂ. ಆರರಲ್ಲಿ ಬುಧವಾರ ಬೆಳಗಿನ 6.30 ಗಂಟೆಗೆ ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ತುಂಬಿದ್ದರು.  ಅವರಲ್ಲೊಬ್ಬ ರಾಜಕೀಯ ಧುರೀಣರೂ ಇದ್ದರು. ಪುದುಚೇರಿ-ದಾದರ್ ಚಾಲುಕ್ಯ ಎಕ್ಸ್ ಪ್ರೆಸ್ ರೈಲು ಆ ದಿನ  40 ನಿಮಿಷ ತಡವಾಗಿ ಆಗಮಿಸಲಿತ್ತು. ಬಹುತೇಕ ಉಳಿದ ಪ್ರಯಾಣಿಕರಂತೆ ಆ ರಾಜಕೀಯ ಮುಖಂಡರೂ ಸಹ ಆ ರೈಲಿನ ಆಗಮನಕ್ಕಾಗಿ ಎದುರು ನೋಡುತ್ತೊದ್ದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಆಗಮಿಸಿದ್ದರು. ಅದೂ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಮುಗಿಸಿ ಕೆಲವೇ ಗಂಟೆಗಳ ಕಾಲ ನಿದ್ದೆ ಮಾಡಿದ್ದು ಮತ್ತೆ ಬುಧವಾರ ಬೆಂಗಳೂರಿನಿಂದ 140 ಕಿ.ಮೀ ದೂರದಲ್ಲಿರುವ ತಿಪಟೂರಿನಲ್ಲಿ ನಡೆಯುವ ಪ್ರಚಾರಕ್ಕಾಗಿ ತೆರಳುವವರಿದ್ದರು. 
ದೇವೇಗೌಡರು ತಾವು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ನಡುವೆ ತಿಪಟೂರಿಗೆ ತೆರಳುವುದಕ್ಕಿಂತ ರೈಲಿನಲ್ಲಿ ಸುಖಕರ ಪ್ರಯಾಣವನ್ನು ಆಯ್ದುಕೊಂಡಿದ್ದರು.  ಇದಕ್ಕಾಗಿ ಅವರು ರೈಲಿನ ಎಸಿ 2 ಟೈರ್ ವಿಭಾಗದಲ್ಲಿ ಎ1 ಆಸನ ಕಾಯ್ದಿರಿಸಿದ್ದಾರೆ. ಅವರೊಡನೆ ಮೂರು ಪೋಲೀಸ್ ಸಿಬ್ಬಂದಿ, ಓರ್ವ ಗನ್ ಮ್ಯಾನ್ ಹಾಗೂ ಅವರ ವೈಯಕ್ತಿಕ ಸಹಾಯಕ ಇದ್ದರು. ರೈಲ್ವೆ ಪ್ರಯಾಣದ ವ್ಳೆ ದೇವೇಗೌಡರು ಒಂದು ಪ್ಲೇಟ್ ಇಡ್ಲಿ ತಿಂದು ಕೆಲ ಮಾತ್ರೆಗಳನ್ನು ಸೇವಿಸಿದ್ದಾರೆ. ಇನ್ನು ಜೆಡಿಎಸ್ ನಾಯಕನಿಗೆ ಯಾವುದೇ ತೊಂದರೆಯಾಗಬಾರದೆಂದು ಅವರ ಸಹಾಯಕರು ಅವರು ಕುಳಿತಿದ್ದ ಆಸನದ ಪಕ್ಕ "Do Not Disturb" ಫಲಕವನ್ನು ಅಳವಡಿಸಿದ್ದರು.
ಪ್ರಯಾಣದ ನಡುವೆ ಸಹಪ್ರಯಾಣಿಕರಿಗಾಗಲಿ, ಪತ್ರಕರ್ತರಿಗಾಗಲಿ ದೇವೇಗೌಡರನ್ನು ಸಂಪರ್ಕಿಸಲು ಅನುಮತಿ ಇರಲಿಲ್ಲ. ರಾತ್ರಿ ನಿದ್ರಿಸದೆ ಇದ್ದ ದ್ವೇಗೌಡರಿಗೆ ಈ ಎರಡು ಗಂಟೆಗಳ ಕಾಲ ನಿರ್=ದ್ರಿಸಲು ಅವಕಾಶವಾಗಿತ್ತು. ಗೌಡರು ತಿಪಟೂರಿಗೆ 10 ಕಿಮೀ ಇದೆ ಎನ್ನುವಾಗ ಎಚ್ಚರವಾಗಿದ್ದಾರೆ. ಪತ್ರಿಕೆ ಸಿಬ್ಬಂದಿ "ಪ್ರಯಾಣ ಹೇಗಿತ್ತು?" ಎಂದು ಕೇಳಲು ಎಚ್.ಡಿಡಿ ಕೇವಲ ಒಂದು ಮುಗುಳ್ನಗು ನಕ್ಕು ಸುಮ್ಮನಾಗಿದ್ದಾರೆ.  ಅವರ ಆಪ್ತ ಸಹಾಯಕಿ ಅಂಜನಿ ಗೌಡ "ನಾವು ಅವರನ್ನು ಎಚ್ಚರಿಸಲಿಲ, ಅವರು ಪ್ರಯಾಣ ಮಾಡುವಾಗ ನಿದ್ರಿಸುತ್ತಿದ್ದರು" ಎಂದಿದ್ದಾರೆ.
ಇತ್ತ ದೇವೇಗೌಡರಿದ್ದ ಕೋಚ್ ನಲ್ಲೇ ಪ್ರಯಾಣಿಸುತ್ತಿದ್ದ ಬೇರೆ ಪ್ರಯಾಣಿಕರು ಮಾತನಾಡಿ "ಗೌಡರು ನಮ್ಮ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದದ್ದು ನಮಗೆ ತಿಳಿದಿದೆ.ಅವರಿಗೆ ಸಹಾಯಕರ ಬೆಂಬಲವಿಲ್ಲದೆಯೇ ನಡೆಯಲು ಸಾಧ್ಯವಿಲ್ಲವೆಂದು  ಎಂಬುದನ್ನು ನಾವು ಅರಿತೆವು, ಅವರೊಮ್ಮೆ ಪ್ರಧಾನಿಯಾಗಿದ್ದಾರೆ, ಈಗ ಇತರರಿಗೆ ದಾರಿ ಮಾಡಿಕೊಡಲಿ" ಎಂದಿದ್ದಾರೆ.
ಇನ್ನೋರ್ವ ಡಿಪ್ಲೊಮಾ ವಿದ್ಯಾರ್ಥಿ ಸೋಹಿಬ್ ಮಾತನಾಡಿ ದೇವೇಗೌಡರು ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದದ್ದು ನನಗೆ ಗೊತ್ತಿದೆ, ಅವರು ತುಮಕೂರಿನಿಂದ ಜಯಗಳಿಸಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದರು. 
ಕಡೆಗೆ ತಿಪಟೂರಿನಲ್ಲಿ ದೇವೇಗೌಡರು ರೈಲಿನಿಂದಿಳಿಯುವ ವೇಳೆ ಸಾವಿರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಅದಾಗಲೇ ಜಮಾಯಿಸಿದ್ದರು. ಜೆಡಿಎಸ್ ನಾಯಕ ಲೋಕೇಶ್ವರ ತಮ್ಮ ನಾಯಕನಿಗೆ ಹಾರ ಹಾಕಿ ಸ್ವಾಗತಿಸಿದ್ದಾರೆ.  ಅವರ ರಕ್ಷಣೆಗಾಗಿ ಬಂದಿದ್ದ ಪೋಲೀಸರು ಶಾ ಇಷ್ಟು ಜನ ಸೇರುವರೆಂದು ನಿರೀಕ್ಷಿಸಿರಲಿಲ್ಲ.  ಕಡೆಗೆ ಸಿದ್ದರಾಮಯ್ಯ, ಜಿ. ಪರಮೇಶ್ವರ ಅವರೊಡನೆ ಸೇರಿದ ದ್ವೇಗೌಡ ತ್ಪಟೂರು ರ್ಯಾಲಿ ಮುಗಿಸಿ ಹೆಲಿಕಾಪ್ಟರ್ ಮೂಲಕ ಬೇರೆ ಊರುಗಳ ರ್ಯಾಲಿಗೆ ತೆರಳಿದ್ದಾರೆ.
SCROLL FOR NEXT