ಸ್ವಾರಸ್ಯ

ಏ.17 ವರೆಗೂ ಬರೊಬ್ಬರಿ 2,600 ಕೋಟಿ ರೂ ವಶಪಡಿಸಿಕೊಂಡ ಚುನಾವಣಾ ಆಯೋಗ

Srinivas Rao BV
ನವದೆಹಲಿ: ಲೋಕಸಭಾ ಚುನಾವಣೆ 2019 ಕ್ಕೆ ದಿನಾಂಕ ಘೋಷಣೆಯಾದಾಗಿನಿಂದ ಏ.17 ವರೆಗೂ ಚುನಾಣಾ ಆಯೋಗ  ದೇಶಾದ್ಯಂತ ಒಟ್ಟಾರೆ 2,600 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. 
ಚುನಾವಣಾ ಪ್ರಚಾರದ ವೇಳೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ಇದಾಗಿದೆ. ಚುನಾವಣಾ ಅಧಿಕಾರಿಗಳು ಹಣ ವಶಪಡಿಸಿಕೊಂಡಿರುವ ಅತಿ ಹೆಚ್ಚು ಪ್ರಕರಣಗಳು ಗುಜರಾತ್ ನಲ್ಲಿ ದಾಖಲಾಗಿದ್ದು, ಒಟ್ಟಾರೆ 543 ಕೋಟಿ ರೂಪಾಯಿ ರಾಜ್ಯದಿಂದ ವಶಕ್ಕೆ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು ರಾಜ್ಯ ಇದ್ದು, 514 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಆಂಧ್ರಪ್ರದೇಶದಲ್ಲಿ 216 ಕೋಟಿ ರೂಪಾಯಿ, ರಾಷ್ಟ್ರರಾಜಧಾನಿಯಲ್ಲಿ 390 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇವಲ ಹಣ ಅಷ್ಟೇ ಅಲ್ಲದೇ ಮಾದಕ ವಸ್ತುಗಳು ಮದ್ಯ ಹಾಗೂ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ. 
SCROLL FOR NEXT