ಹಾಸನ: ಮತ ಕೇಳಲು ಬಂದ ಸ್ಥಳೀಯ ಶಾಸಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಹಾಸನ ಜಿಲ್ಲೆಯ ಹಿರೀಸಾವೆ ಹೋಬಳಿಯಲ್ಲಿ ನಡೆದಿದೆ.
ಕೆರೆಗಳಿಗೆ ನೀರು ತುಂಬಿಸದಿದ್ದರೇ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟಿಸುತ್ತಿರುವವರ ಸಮಾಧಾನ ಪಡಿಸಲು ಹೋದ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಏರು ಬಿಸಿಲಿನಲ್ಲಿಯೇ ಗ್ರಾಮಸ್ಥರು 2.5 ಕಿ.ಮೀ. ನಡೆಸಿ ಬೆವರಿಳಿಸಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ದಿಡಗ ಮತ್ತು ಕಬ್ಬಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಜನರು, ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟನೆ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಆಗಮಿಸಿದ್ದರು. ಆಗ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕೆರೆ ನೋಡಿ ಎಂದು ಹೇಳಿದ್ದಾರೆ. ಹೀಗಾಗಿ ಶಾಸಕರು ಬಿಸಿಲಿನಲ್ಲೇ ಗ್ರಾಮಸ್ಥರೊಂದಿಗೆ 2.5 ಕಿ.ಮೀ ನಡೆದಿದ್ದಾರೆ.
ನಂತರ ಕೆರೆಯ ಬಳಿ ಕೂತು ಮಾತುಕತೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಕೆರೆಗಳಿಗೆ ನೀರು ತುಂಬಿಸಲು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ನಾಗಮಂಗಲದ ನಾಲೆಯಿಂದ ನೀರು ತರೋ ಯೋಜನೆ ವಿಳಂಬವಾಗಿದೆ. ಈಗಾಗಲೇ ಸರ್ಕಾರ, ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟಅಧಿಕಾರಿಗಳ ಜೊತೆ ಮಾತನಾಡಿದ್ದು, ಆದಷ್ಟುಶೀಘ್ರವೇ ಬಹುದಿನಗಳ ಸಮಸ್ಯೆ ಬಗೆಹರಿಸಲಾಗುವುದು. ಈ ಬಾರಿಯ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭ
ಕಳೆದ ಐದು ಆರು ಚುನಾವಣೆಗಳಿಂದ ಕೂಡ ನಮ್ಮ ಭಾಗಕ್ಕೆ ಕುಡಿಯುವ ನೀರಿಗೆ ಹಾಹಾಕಾರ ವಿದೆ ಜನ ಜಾನುವಾರುಗಳು ಗೂ ಕೂಡ ನೀರಿಲ್ಲದೆ ಮರಗಳು ಒಣಗಿ ನಿಂತಿವೆ ತುಮಕೂರು ಜಿಲ್ಲೆಯ ಮುದ್ದನಹಳ್ಳಿ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ಮಾಡಿಕೊಡಿ ಅಂತ ಕೇಳುತ್ತಲೇ ಬಂದಿದ್ದೇವೆ.
ಆದರೆ ಚುನಾವಣೆ ಬಂದಾಗ ಮಾತ್ರ ಭರವಸೆಗಳನ್ನು ಕೊಡುವ ಮೂಲಕ ನಂತರದ ದಿನದಲ್ಲಿ ಸುಮ್ಮನಾಗಿರುತ್ತೀರಿ ಈ ಬಾರಿ ನಾವು ನಿಮಗೆ ಮಾಡುವುದಿಲ್ಲ ಬದಲಿಗೆ ಬಹಿಷ್ಕಾರ ಮಾಡುತ್ತೇವೆ ಅಂತ ಶಾಸಕರ ಸಮ್ಮುಖದಲ್ಲಿಯೇ ಪ್ರತಿಭಟನೆ ಮಾಡುವ ಮೂಲಕ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos