ರಾಜ್ಯ ಲೋಕಸಭೆ ಚುನಾವಣಾ ದಿಕ್ಸೂಚಿ ಬದಲಿಸುವ ತಾಕತ್ ಇರುವುದು ಕರ್ನಾಟಕ ಮಹಿಳೆಯರಿಗೆ!
ಬೆಂಗಳೂರು: ರಾಜಕೀಯ ಪಕ್ಷಗಳು ಮಹಿಳೆಯರಿಗೆ ಮೀಸಲಾತಿ ನೀಡುವ ವಿಷಯ ಭರವಸೆಯಾಗಿಯೇ ಉಳಿದಿದೆ. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಅಧಿಕವಾಗಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ, ಹೀಗಾಗಿ ಅಭ್ಯರ್ಥಿಗಳ ಗೆಲುವಿನ ಹಿಂದೆ ಮಹಿಳಾ ಮತದಾರರ ಪ್ರಾಮುಖ್ಯತೆ ಎದ್ದು ಕಾಣುತ್ತಿದೆ, ಈ ಬಾರಿಯ ಚುನಾವಣೆಯಲ್ಲಿ ಒಟ್ಟು, 5,03,07,182 ಮತದರಾರರಿದ್ದು 2,54,55,976 ಪುರುಷರು ಹಾಗೂ 2,48,46,488 ಮಹಿಳೆಯರು ಮತ್ತು 4,718 ಮತ್ತಿತರರ ಮತದಾರರಿದ್ದಾರೆ, ಮಹಿಳೆಯರುಪ ಮತದಾನ ಮಾಡುವಾ ಆಯ್ಕೆ ಮಾಡುವ ಅಭ್ಯರ್ಥಿಯಿಂದ ಹಲವು ಬದಲಾವಣೆಯಾಗುವ ಸಾಧ್ಯತೆಯಿದೆ.
ಈ ಮಹಿಳೆಯರು ಅಭ್ಯರ್ಥಿಗಳ ಘೋಷಣೆಗಳ ಬಗ್ಗೆ ಚರ್ಚಿಸುತ್ತಾರೆ, ಅವರು ಕುಟುಂಬಕ್ಕೆ ಪೂರಕವಾಗಿರುವ ಯೋಜನೆಗಳ ಬಗ್ಗೆ ಗಮನ ಹರಿಸುತ್ತಾರೆ, ತಾವು ಮಾಡು ಉಳಿತಾಯ ಹಣದಿಂದ ಮಕ್ಕಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುವಂತ ಯೋಜನೆಗಳಿಗೆ ಒತ್ತು ನೀಡುತ್ತಾರೆ, ಅಥಣಿಯ ಕುಟುಂಬವೊಂದರ ಮಹಿಳೆ ಮುಂದೆ ಒಂದು ಪ್ರಶ್ನೆ ಇಡಲಾಗಿತ್ತು, ನಿಮ್ಮ ಕುಟುಂಬದಲ್ಲಿ ಯಾವ ಅಭ್ಯರ್ಥಿಗೆ ಮತ ಹಾಕಬೇಕೆಂದು ನಿರ್ಧರಿಸುವುದು ಯಾರು ನಿಮ್ಮ ಮನೆಯ ಗಂಡಸರೇ ಎಂದು ಪ್ರಶ್ನಿಸಲಾಗಿತ್ತು, ನಾವು ಯಾರ ಇಚ್ಚೆಯಂತೆಯೂ ಮತ ಚಲಾಯಿಸುವುದಿಲ್ಲ, ಯಾರಿಗೆ ಮತದಾನ ಮಾಡಬೇಕು ಎಂದು ನಮಗೆ ಅನ್ನಿಸುತ್ತದೆಯೋ ಅವರಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದು ನಮ್ಮ ಹಕ್ಕು , ನಮ್ಮ ಆಯ್ಕೆ ಇದು ಹಲವು ಹಳ್ಳಿಗಳಲ್ಲಿ ಕೇಳಿಬಂದ ಮಹಿಳಾ ಮತದಾರರ ಅನಿಸಿಕೆ.
ಸಂಸದೆ ಶೋಭಾ ಕರಂದ್ಲಾದೆ ಸ್ಪರ್ಧಿಸಿರುವ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಹಿಳೆಯರೇ ತಮಗೆ ಹೆಚ್ಚು ಬೆಂಬಲಿಸುತ್ತಾರೆ ಎಂದು ನಂಬಿದ್ದಾರೆ. ಈ ಭಾಗದ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರ್ಯರು, ನಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬ ಬಗ್ಗೆ ಅರಿವಿರುವ ಅವರು ಮನೆಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಹೆಚ್ಚಿನ ಮಹಿಳಾ ಮತದಾರರಿರುವುದು ನನಗೆ ಪ್ಲಸ್ ಪಾಯಿಂಟ್ ಮಹಿಳೆಯರ ಧ್ವನಿಯನ್ನು ನಾನು ಪ್ರತಿನಿಧಿಸುತ್ತೇನೆ, ಈ ಬಾರಿಯೂ ಅವರು ಮತನೀಡಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ 278 ಅಭ್ಯರ್ಥಿಗಳು ಕಣದಲ್ಲಿದ್ದಾರೆ, ಅದರಲ್ಲಿ 20ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳಿದ್ದಾರೆ, ಮಹಿಳಾ ಮತದಾರರು ಮಹಿಳೆಯರಿಗೆ ಮತ ಚಲಾಯಿಸಲು ಬಯಸುತ್ತಾರೆ, ಎಂದು ಪ್ರೊ, ಮುಜಾಫಕ್ ಅಸಾದಿ ತಿಳಿಸಿದ್ದಾರೆ, ಪುರುಷರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋಗುವ ಕಾರಣ ಪುರುಷರಿಂತ ಮಹಿಳೆಯರ ಸಂಖ್ಯೆ ಹೆಚ್ಚಿದೆ.ಮಂಗಳೂರು, ಮತ್ತು ಕರಾವಳಿ ಭಾಗದ ಹೆಚ್ಚಿನ ಗಂಡಸರು ಹೊರದೇಶದಲ್ಲಿರುತ್ತಾರೆ,.
ಈ ಪುರುಷರು ಮತದಾನ ಮಾಡುವುದರಿಂದ ವಂಚಿತರಾಗುತ್ತಾರೆ, ಪುರುಷ ಮತದಾರರು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಮಾದರಿಯಾಗಿಟ್ಟುಕೊಳ್ಳುತ್ತಾರೆ. ಒಂದು ವೇಳೆ ಜಾತಿ ನೋಡಿ ಮತ ಹಾಕುವುದಿದ್ದರೇ ಮಹಿಳೆಯರು ತಮ್ಮ ಜಾತಿಯ ಅಭ್ಯರ್ಥಿಗೆ ಹಾಕುತ್ತಾರೆ, ತಮ್ಮ ಜಾತಿಯ ಅಭ್ಯರ್ಥಿ ಆಯ್ಕೆಯಾದರೆ ತಮಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಮತದಾನ ಮಾಡಿರುತ್ತಾರ ಎಂದು ವಿಶ್ಲೇಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics