ಸ್ವಾರಸ್ಯ

ಚುನಾವಣೆ ಪ್ರಚಾರ ಮಧ್ಯೆ ಹಾವುಗಳೊಡನೆ ಆಟವಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ-ವಿಡಿಯೊ ವೈರಲ್

Sumana Upadhyaya
ಲಕ್ನೊ: ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರದ ನಡುವೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಉತ್ತರ ಪ್ರದೇಶದ ಪೂರ್ವ ವಲಯ) ಪ್ರಿಯಾಂಕಾ ಗಾಂಧಿ ವಾದ್ರಾ ಹಾವನ್ನು ಕೈಯಲ್ಲಿ ಎತ್ತಿ ಆಟವಾಡುತ್ತಿರುವ ಅಪರೂಪದ ದೃಶ್ಯ ಸೆರೆಯಾಗಿದೆ.
ಹಾವಿನ ಜೊತೆ ಹುಷಾರಾಗಿರಿ ಎಂದು ಅಲ್ಲಿದ್ದವರು ಹೇಳಿದಾಗ ಪ್ರಿಯಾಂಕಾ, ಏನಾಗುವುದಿಲ್ಲ, ಹಾವು ಏನೂ ಮಾಡುವುದಿಲ್ಲ ಎಂದರು. ಹಾವಾಡಿಗರ ಬದುಕು, ಅವರಲ್ಲಿರುವ ಹಾವುಗಳು ಯಾವ ಜಾತಿಯವು ಎಂದೆಲ್ಲ ಕೇಳಿ ತಿಳಿದುಕೊಂಡರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಈ ಕ್ಷೇತ್ರದ ಬೆಳವಣಿಗೆಗೆ ನಮ್ಮ ತಾಯಿ ಸೋನಿಯಾ ಗಾಂಧಿ ಸಂಸದೆಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಅವರು ಸಂಸದರಾಗಿದ್ದು ಅವರು ಮಾಡಿದ ಕೆಲಸಗಳಿಂದ ಜನರಲ್ಲಿ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ ಎಂದರು.
ಕಳೆದೆರಡು ದಿನ ಪ್ರಿಯಾಂಕಾ ಗಾಂಧಿ ತಮ್ಮ ಸೋದರ ರಾಹುಲ್ ಗಾಂಧಿ ಪರ ಅಮೇಥಿಯಲ್ಲಿ ಪ್ರಚಾರ ನಡೆಸಿದ್ದರು.
SCROLL FOR NEXT