ದೇಶ

ಅಸ್ಸಾಂ: ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕ!

Srinivas Rao BV
ಗುವಾಹಟಿ: ಅಸ್ಸಾಂ ನ 14 ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿದೆ. 
ಕರಿಂಗಂಜ್, ಸಿಲ್ಚಾರ್, ಧುಬ್ರಿ, ಕೊಕ್ರಝಾರ್, ತೇಜ್ಪುರ್, ಮಂಗಲ್ಡೊಯ್ ಮತ್ತು ನೌಗಾಂಗ್ ಕ್ಷೇತ್ರಗಳು ಮುಸ್ಲಿಂ ಬಾಹುಳ್ಯವಿರುವ ಪ್ರದೇಶವಾಗಿದ್ದು, ಅವರ ಮತಗಳು ನಿರ್ಣಾಯಕವಾಗಿವೆ.
ಬರಕ್ ಕಣಿವೆಯ ಮೀಸಲು ಕ್ಷೇತ್ರವಾಗಿರುವ ಕರಿಂಗಂಜ್ ನಲ್ಲಿ ಹತ್ತಿರ ಹತ್ತಿರ 8 ಲಕ್ಷ ಮುಸ್ಲಿಂ ಮತದಾರರಿದ್ದಾರೆ.  ಆಲ್ ಇಂಡಿಯಾ ಯುನೈಟೆಡ್ ಡೆಮಾರ್ಕೆಟಿಕ್ ಫೋರಂ (ಎಐಯುಡಿಎಫ್) ನ  ರಾಧೆಶ್ಯಾಮ್ ಬಿಸ್ವಾಸ್ ಇಲ್ಲಿನ ಪ್ರತಿನಿಧಿ. 2019 ರ ಲೋಕಸಭಾ ಚುನಾವಣೆಗೆ ಎಐಯುಡಿಎಫ್ ಮತ್ತೊಮ್ಮೆ ರಾಧೆಶ್ಯಾಮ್ ಬಿಸ್ವಾಸ್ ನ್ನು ಬಿಜೆಪಿಯ ಕೃಪಾನಾಥ್ ಮಲ್ಲಾಹ್ ವಿರುದ್ಧ ಮತ್ತೆ ಕಣಕ್ಕಿಳಿಸಿದ್ದರೆ, ಟಿಎಂಸಿ ಚಂದನ್ ದಾಸ್ ಗೆ ಟಿಕೆಟ್ ನೀಡಿದೆ. 
ಸಿಲ್ಚಾರ್ ನಲ್ಲಿ 5 ಲಕ್ಷ ಜನ ಮುಸ್ಲಿಂ ಸಮುದಾಯದವರಿದ್ದು (ಶೇ.35) ನಿರ್ಣಾಯಕ ಸಂಖ್ಯೆಯಲ್ಲಿದ್ದು, ಕಾಂಗ್ರೆಸ್ ನ ಹಾಲಿ ಸಂಸದರಾಗಿರುವ ಸುಷ್ಮಿತಾ ದೇವ್ ಪುನರಾಯ್ಕೆ ಬಯಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿ ಬೆಂಗಾಲಿ ಹಿಂದೂಗಳೂ ಇದ್ದಾರೆ. 
ಧುಬ್ರಿಯಲ್ಲಿ 13 ಲಕ್ಷ ಮುಸ್ಲಿಂ ಮತಗಳಿದ್ದು, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಪುನರಾಯ್ಕೆ ಬಯಸುತ್ತಿದ್ದಾರೆ. 
ಮುಸ್ಲಿಂ ಮತ ಬ್ಯಾಂಕ್ ನ್ನು ಹಿಡಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಎಐಡಿಯುಎಫ್ ಧುಬ್ರಿ, ಕರಿಂಗಂಜ್ ಹಾಗೂ ಬಾರ್ಪೆಟಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಪಕ್ಷಕ್ಕೆ ಸುಮಾರು 5 ಲಕ್ಷ ಮುಸ್ಲಿಮರಿರುವ ಕರಿಂಗಂಜ್ ನಲ್ಲಿ ಬೆಂಬಲ ನೀಡಿದೆ. 
ಕಳೆದ ಲೋಕಸಭಾ ಚುನಾವಣೆಯಲ್ಲಿ ಗುವಾಹಟಿ (4.5 ಲಕ್ಷ ಮುಸ್ಲಿಂ ಮತದಾರರು), ಮಂಗಲ್ಡಾಯ್, ತೇಜ್ಪುರ್ (3 ಲಕ್ಷ ಮುಸ್ಲಿಂ ಮತದಾರರು), ನೌಗಾಂಗ್ (7 ಲಕ್ಷ ಮುಸ್ಲಿಂಮತದಾರರು), ಜೋರ್ಹತ್, ಡಿಬ್ರುಘರ್ ಮತ್ತು ಲಖಿಂಪುರ್ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಧುಬ್ರಿ, ಬಾರ್ಪೆಟಾ ಕ್ಷೇತ್ರಗಳನ್ನು ಮಿತ್ರ ಪಕ್ಷ ಅಸ್ಸಾಂ ಗಣ ಪರಿಷತ್ (ಎಜಿಪಿ) ಗೆ ಬಿಟ್ಟುಕೊಟ್ಟಿದೆ. 
SCROLL FOR NEXT