ಗಿರೀಶ್ ಮಹಾಜನ್ ಹಾಗೂ ಕಾರ್ಯಕರ್ತರು 
ದೇಶ

ಮಹಾ ಸಚಿವ ಗಿರೀಶ್ ಮಹಾಜನ್‌ ಮೇಲೆ ಬಿಜೆಪಿ ಕಾರ್ಯಕರ್ತರಿಂದಲೇ ಹಲ್ಲೆ, ವಿಡಿಯೋ ವೈರಲ್

ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಮತ್ತು ಮಾಜಿ ಶಾಸಕ ಬಿ.ಎಸ್‌. ಪಾಟೀಲ್‌ ಅವರ ಮೇಲೆ ಬಿಜೆಪಿ ಕಾರ್ಯಕರ್ತರೇ ಹಲ್ಲೆ....

ಜಲಗಾಂವ್: ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಮತ್ತು ಮಾಜಿ ಶಾಸಕ ಬಿ.ಎಸ್‌. ಪಾಟೀಲ್‌ ಅವರ ಮೇಲೆ ಬಿಜೆಪಿ ಕಾರ್ಯಕರ್ತರೇ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದ್ದು, ಘಟನೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಅಮಲ್‌ನೀರ್‌ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಬಿಜೆಪಿ ಜಲಗಾಂವ್ ಅಧ್ಯಕ್ಷ ಉದಯ್‌ ವಾಘಾ ಮತ್ತು ಅವರ ಬೆಂಬಲಿಗರು ಬಿಜೆಪಿ ಸಚಿವ ಹಾಗೂ ಶಾಸಕರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಜಲಗಾಂವ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉನ್ಮೇಶ್‌ ಪಾಟೀಲ್‌ ಅವರ ಪರವಾಗಿ ಬುಧವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ.
ಜಲಗಾಂವ್ ಕ್ಷೇತ್ರದಿಂದ ಉದಯ್ ವಾಘಾ ಅವರ ಪತ್ನಿ, ವಿಧಾನ ಪರಿಷತ್ ಸದಸ್ಯೆ ಸ್ಮಿತಾ ವಾಘಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಾಸಕ ಉನ್ಮೇಶ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. 
ನಿನ್ನೆ ನಡೆದ ಸಮಾವೇಶದ ವೇಳೆ, ವಾಘಾ ಮತ್ತು ಅವರ ಬೆಂಬಲಿಗರು ಕೋಪಗೊಂಡು ಪಾಟೀಲ್ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ಮಹಾಜನ್ ಮಧ್ಯಪ್ರವೇಶಿಸಿದ್ದು, ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

‘ಡಿಕೆಶಿಗಿಂತ 4 ಪಟ್ಟು ಹೆಚ್ಚು ಸಂಪತ್ತು HDK ಬಳಿ ಇದೆ, ಏರ್​ಪೋರ್ಟ್ ರಸ್ತೆ, ನೆಲಮಂಗಲದಲ್ಲೂ ಆಸ್ತಿ ಇದೆ; ಇದೆಲ್ಲ ಎಲ್ಲಿಂದ ಸಂಪಾದನೆ ಮಾಡಿದರು?

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ