ರಾಜ್ ಠಾಕ್ರೆ 
ದೇಶ

ನೀವು ನೆಹರು, ಇಂದಿರಾರನ್ನು ಟೀಕಿಸುತ್ತೀರಿ, ಅವರನ್ನೇ ಅನುಸರಿಸುತ್ತೀರಿ: ಮೋದಿಗೆ ರಾಜ್ ಠಾಕ್ರೆ ಸವಾಲ್

ಪ್ರಧಾನಿ ನರೇಂದ್ರ ಮೋದಿ ನೆಹರು, ಇಂದಿರಾಗಾಂಧಿಯವರನ್ನು ತೆಗಳುತ್ತಲೇ ಅವರನ್ನೇ ಅನುಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೆಹರು, ಇಂದಿರಾಗಾಂಧಿಯವರನ್ನು ತೆಗಳುತ್ತಲೇ ಅವರನ್ನೇ ಅನುಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ. ಪ್ರಥಮ್ ಸೇವಕ್ ಎಂಬ ಪದವನ್ನು ಮೊದಲ ಬಾರಿಗೆ ಭಾರತದ ಪ್ರಧಾನಿ ಜವಾಹರಲಾಲ್ ನೆಹರುಬಳಕೆ ಮಾಡಿದ್ದರು, ನೆಹರು "ಪ್ರಥಮ್ ಸೇವಕ್" ಎಂದಿದ್ದನ್ನು ಮೋದಿ "ಪ್ರಧಾನ್ ಸೇವಕ್" ಂದು ಬದಲಿಸಿಕೊಂಡಿದ್ದಾರೆ ಎಂದಿರುವ ಠಾಕ್ರೆ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ನವದೆಹಲಿಯ ತೀನ್ ಮೂರ್ತಿ ಭವನ್ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಪಂಡಿತ್ ನೆಹರು ಅವರ ಈ ಹೇಳಿಕೆ ಕೆತ್ತಲ್ಪಟ್ಟಿದೆ."ಇಸ್ ದೇಶ್ ಕಿ ಜನತಾ ಹಮೇ ಪ್ರಧಾನ್ ಮಂತ್ರಿ ನ ಕಹೇ, ಪ್ರಥಮ್ ಸೇವಕ್ ಕಹೇ" ಎಂದು ನೆಹರು ಹೇಳಿದ್ದರು.
ನೆಹರು ಅವರ ಹೇಳಿಕೆಯ ಪ್ರಥಮ್ ಸೇವಕ್ ಎಂಬ ಪದವನ್ನು ಮೋದಿ ಪ್ರಧಾನ್ ಸೇವಕ್ ಎಂದು ಬದಲಿಸಿಕೊಂಡಿದ್ದಾರೆ ಎಂದು ಠಾಕ್ರೆ ದೂರಿದರು.ಕಾಂಗ್ರೆಸ್ ನೇತೃತ್ವದ 56 ಪಕ್ಷಗಳ ಮಹಾಘಟಬಂಧನ್ ಅಭಿಯಾನದ ಪರ ಅವರು ಮಾತನಾಡುತ್ತಿದ್ದರು.
"ಮೋದಿ ನೆಹರು ಹಾಗೂ ಇಂದಿರಾ ಗಾಂಧಿಯವರನ್ನು ದ್ವೇಷಿಸುತ್ತೀರಿ, ಆದರೆ ಈಗಲೂ ನೀವು ಅವರನ್ನೇ ಅನುಸರಿಸುತ್ತೀರಿ.  ಕಳೆದ ಐದು ವರ್ಷಗಳಲ್ಲಿ ನೀವು ಎಲ್ಲ ವಿಚಾರದಲ್ಲಿಯೂ ದೇಶಕ್ಕೆ ಸುಳ್ಳು ಹೇಳಿಕೊಂಡು ಬಂದಿದ್ದೀರಿ. "
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಗಲ್ಲಿಗೇರುವುದಕ್ಕೆ ಸಿದ್ದವಾಗಿದ್ದ ಭಗತ್ ಸಿಂಗ್ ಅವರನ್ನು ಕಾಂಗ್ರೆಸ್ ಕುಟುಂಬ ಸದಸ್ಯರೊಬ್ಬರೂ ಭೇಟಿಯಾಗಿಲ್ಲ ಎಂದಿದ್ದ ಮೋದಿ ಹೇಳೀಕೆ ಉಲ್ಲೇಖಿಸಿದ ಠಾಕ್ರೆ  ನೆಹರು ಅವರು ಭಗತ್ ಸಿಂಗ್ ಅವರನ್ನು ಎರಡು ಬಾರಿ ಜೈಲಿನಲ್ಲಿ ಭೇಟಿಯಾಗಿದ್ದರೆಂದು ಹಳೆಯ ಪತ್ರಿಕೆ ತುಣುಕಿನ ಮೂಲಕ ಸಾಕ್ಷಿ ತೋರಿಸಿದ್ದಾರೆ.
"ಮೋದಿಯವರೇ ಕಾಂಗ್ರೆಸ್ ಕುಟುಂಬ ಎಂದರೆ ಯಾವುದು? ನೆಹರು ಕುಟುಂಬವೆ? ಗಾಂಧಿ ಕುಟುಂಬವೆ? ಪಟೇಲ್, ಸರೋಜಿನಿ ನಾಯ್ಡು, ಮೌಲಾನಾ ಆಜಾದ್ ಕುಟುಂಬಗಳೆ? ನೆಹರು ಅವರ ಕುಟುಂಬವಾಗಿದ್ದರೆ ಭಗತ್ ಸಿಂಗ್ ಅವರನ್ನು ಜೈಲಿನಲ್ಲಿ ಎರಡು ಬಾರಿ ನೆಹರು ಭೇಟಿಯಾಗಿದ್ದರು.ಅದು ಇಂದಿರಾ ಅವರ ಕುಟುಂಬವಾಗಿದ್ದು ಆ ಸಮಯದಲ್ಲಿ ಇಂದಿರಾ ಅವರಿಗೆ ಕೇವಲ  14 ವರ್ಷ ವಯಸ್ಸಾಗಿತ್ತು, ರಾಜೀವ್, ಸಂಜಯ್, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಕುಟುಂಬದ ಪ್ರಶ್ನೆ ಇಲ್ಲಿ ಬರುವುದಿಲ್ಲ"
ಮೋದಿ ಮತ್ತು ಭಾರತೀಯ ಜನತಾಪಕ್ಷದ ಅಧ್ಯಕ್ಷ ಅಮಿತ್ ಶಾ ಅಪಾಯಕಾರಿ" ಜನರಾಗಿದ್ದಾರೆಂದು ಹೇಳಿದ ಠಾಕ್ರೆ ಅವರು ಅಧಿಕಾರಕ್ಕೆ ಮರಳಿದರೆ ಇಡೀ ದೇಶವನ್ನು ತಮ್ಮ ಗುಲಾಮರಿಗೆ ವಹಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT