ಮತದಾನ ಆರಂಭ 
ದೇಶ

ಲೋಕಸಭೆ ಚುನಾವಣೆ: 2ನೇ ಹಂತದಲ್ಲಿ 11 ರಾಜ್ಯಗಳ 95 ಕ್ಷೇತ್ರಗಳಲ್ಲಿ ಇಂದು ಮತದಾನ

ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ಆರಂಭವಾಗಿದೆ.

ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ದೇಶದ ಒಟ್ಟು 96 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದ ಮತದಾನ ಆರಂಭವಾಗಿದೆ.
ದೇಶದೆಲ್ಲೆಡೆ ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಮೊದಲನೇ ಹಂತದ ಯಶಸ್ವಿ ಮತದಾನದ ಬಳಿಕ ಇಂದು ಎರಡನೇ ಹಂತದ ಮತದಾನ ಆರಂಭವಾಗಿದೆ. ಕೇಂದ್ರದಲ್ಲಿ ಅಧಿಕಾರಗ ಗದ್ದುಗೆ ಹಿಡಿಯಲು ಈ ವರೆಗೂ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಎರಡನೇ ಹಂತದ ಲೋಕ ಸಭಾ ಚುನಾವಣೆಯಲ್ಲಿ 11 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ನಡೆಯಲಿದೆ. 
96 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕ, ಅಸ್ಸಾಂ, ಬಿಹಾರ​, ಜಮ್ಮು ಕಾಶ್ಮೀರ​, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಪ್ರಜಾಪ್ರಭುತ್ವದ ಕರ್ತವ್ಯ ನೆರವೇರಲಿದೆ. ಎರಡನೇ ಹಂತದ ಚುನಾವಣೆಯಲ್ಲಿ 12 ರಾಜ್ಯಗಳ ಘಟಾನುಘಟಿಗಳು ಅಖಾಡದಲ್ಲಿದ್ದಾರೆ. ಅದರಲ್ಲಿ ಪ್ರಮುಖರೆಂದರೆ, ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್, ಪಾನ್ ರಾಧಾಕೃಷ್ಣನ್, ಸದಾನಂದಗೌಡ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಡಿಎಂಕೆ ಪಕ್ಷದ ದಯಾನಿಧಿ ಮಾರನ್, ಎ.ರಾಜಾ, ಕನಿಮೋಳಿ ಇವರೆಲ್ಲರ ಭವಿಷ್ಯ ಇಂದು ಮತದಾರನ ಬೆರಳ ತುದಿಯಲ್ಲಿದೆ.
ಅಂತೆಯೇ ಕರ್ನಾಟಕದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ ಇಂದೇ ಮತದಾನವಾಗುತ್ತಿದೆ. 
ಯಾವೆಲ್ಲ ರಾಜ್ಯಗಳಲ್ಲಿ ಚುನಾವಣೆ?
ಇವತ್ತು ಬರೀ ಕರ್ನಾಟಕ ಅಷ್ಟೇ ಅಲ್ಲ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಕರ್ನಾಟಕ 14 ಕ್ಷೇತ್ರ, ತಮಿಳುನಾಡು 38 ಕ್ಷೇತ್ರ, ಮಹಾರಾಷ್ಟ್ರ 10 ಕ್ಷೇತ್ರ, ಉತ್ತರಪ್ರದೇಶ 8 ಕ್ಷೇತ್ರ, ಅಸ್ಸಾಂ 5 ಕ್ಷೇತ್ರ, ಬಿಹಾರ 5 ಕ್ಷೇತ್ರ, ಒಡಿಶಾ 5 ಕ್ಷೇತ್ರ, ಛತ್ತೀಸ್‍ಗಢ 3 ಕ್ಷೇತ್ರ, ಪ. ಬಂಗಾಳ 3 ಕ್ಷೇತ್ರ, ಕಾಶ್ಮೀರ 2 ಕ್ಷೇತ್ರ, ಮಣಿಪುರ 1 ಕ್ಷೇತ್ರ, ತ್ರಿಪುರ 1 ಕ್ಷೇತ್ರ, ಪುದಿಚೇರಿ 1 ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್