ಸಂಗ್ರಹ ಚಿತ್ರ 
ದೇಶ

ಮೋದಿ ಜೀ ಗೆಲ್ಲುತ್ತಾರೆಂದು ಭಾವಿಸಿ ಸುಮ್ಮನಿರಬೇಡಿ, ಹೋಗಿ ಮತದಾನ ಮಾಡಿ: ಪ್ರಧಾನಿ ಮೋದಿ

ರ್ಯಾಲಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಾತ್ರಕ್ಕೇ ಗೆಲುವು ಸಾಧ್ಯವಿಲ್ಲ. ಮತದಾನದ ದಿನ ಹೋಗಿ ಮತದಾನ ಮಾಡಿದರೆ ಮಾತ್ರ ಗೆಲುವು ಸಾಧಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಾರಣಾಸಿ: ರ್ಯಾಲಿ, ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಾತ್ರಕ್ಕೇ ಗೆಲುವು ಸಾಧ್ಯವಿಲ್ಲ. ಮತದಾನದ ದಿನ ಹೋಗಿ ಮತದಾನ ಮಾಡಿದರೆ ಮಾತ್ರ ಗೆಲುವು ಸಾಧಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ತಮ್ಮ ವಾರಣಾಸಿ ಕ್ಷೇತ್ರದಿಂದ ನಾಪಪತ್ರ ಸಲ್ಲಿಸಿದ ಪ್ರಧಾನಿ ಮೋದಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ನಿನ್ನೆ ನಡೆದ ರ್ಯಾಲಿಯ ಕುರಿತು ಮಾತನಾಡಿದ ಅವರು, ನನ್ನ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ಕಾಶಿ ಜನತೆಗೆ ನಾನು ಅಭಾರಿಯಾಗಿದ್ದೇನೆ. ಕಳೆದ ಬಾರಿ ಅವರು ನನಗೆ ಅಶೀರ್ವದಿಸಿದ್ದಾರೆ. ನಿನ್ನೆ ರೋಡ್ ಶೋ ಯಶಸ್ಸು ಕೇವಲ ಅವರಿಗೇ ಸಲ್ಲಬೇಕು ಎಂದು ಪ್ರಧಾನಿ ಮೋದಿ ರೋಡ್ ಶೋನಲ್ಲಿ ಪಾಲ್ಗೊಂಡ ಜನರಿಗೆ ಧನ್ಯವಾದ ಹೇಳಿದರು.
ಇದೇ ವೇಳೆ ಮತದಾನದ ದಿನದಂದು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನರು ಮತದಾನ ಮಾಡಬೇಕು. ಮೋದಿ ಜೀ ಗೆಲ್ಲುತ್ತಾರೆ ಎಂದು ಕೊಂಡು ಮತದಾನ ಮಾಡದೇ ಇರಬೇಡಿ. ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕಾಗಿದ್ದು, ಅದರ ಚಲಾವಣೆಯನ್ನು ಮರೆಯಬೇಡಿ. ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎಂಬುದು ದೊಡ್ಡ ಉತ್ಸವ ಇದ್ದಂತೆ. ಜನರ ಮತದಾನ ಮಾಡಿದರೆ ಮಾತ್ರ ಆ ಉತ್ಸವ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಅಂತೆಯೇ ಬಲಿಷ್ಟ ಸರ್ಕಾರಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದ ಮೋದಿ, ವಿಪಕ್ಷಗಳು ಹೆಣೆದಿರುವ ಬಲೆಗೆ ಬೀಳಬೇಡಿ. ದೊಡ್ಡ ಪ್ರಮಾಣದಲ್ಲಿ ಮತ ನೀಡಿ ನಮ್ಮ ಕೈ ಬಲಪಡಿಸಿ ಎಂದು ಮೋದಿ ಕರೆ ಕೊಟ್ಟರು. 
ಇನ್ನು ಮುಂಬರುವ ಮೇ 19ರಂದು ವಾರಣಾಸಿಯಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP