ದೇಶ

ನಾಲ್ಕನೇ ಹಂತದ ಮತದಾನ: ಅಪರಾಹ್ನ 3 ಗಂಟೆಯವರೆಗೂ ಶೇ.49.53 ರಷ್ಟು ಮತದಾನ

Nagaraja AB

ನವದೆಹಲಿ: 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಅಪರಾಹ್ನ 3 ಗಂಟೆಯವರೆಗೂ ಶೇ, 49. 53 ರಷ್ಟು ಮತದಾನವಾಗಿದೆ.

ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಬಿಹಾರದಲ್ಲಿ ಶೇ, 44.23, ಜಮ್ಮು- ಕಾಶ್ಮೀರ ಶೇ. 8. 42, ಜಾರ್ಖಂಡ್ ಶೇ, 56. 37, ಮಧ್ಯ ಪ್ರದೇಶ ಶೇ, 55.22, ಮಹಾರಾಷ್ಟ್ರ ಶೇ. 41.15 ಒಡಿಶಾ ಶೇ. 51.54, ರಾಜಸ್ತಾನ ಶೇ, 54.16, ಉತ್ತರ ಪ್ರದೇಶ ಶೇ, 44.16 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ, 66. 01 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳಿಂದ ತಿಳಿದುಬಂದಿದೆ.

ಮಧ್ಯಾಹ್ನ 12 ಗಂಟೆ ವೇಳೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.3.74 ರಷ್ಟು, ಜಾರ್ಖಂಡ್ ನಲ್ಲಿ ಶೇ. 29.01 ರಷ್ಟು, ಮಧ್ಯ ಪ್ರದೇಶದಲ್ಲಿ ಶೇ.17.04ರಷ್ಟು, ಮಹಾರಾಷ್ಟ್ರದಲ್ಲಿ ಶೇ. 17.04ರಷ್ಟು, ಬಿಹಾರದಲ್ಲಿ ಶೇ.18.26ರಷ್ಟು, ಒಡಿಶಾದಲ್ಲಿ ಶೇ. 19.67ರಷ್ಟು, ರಾಜಸ್ಥಾನದಲ್ಲಿ ಶೇ. 29.29ರಷ್ಟು, ಉತ್ತರ ಪ್ರದೇಶದಲ್ಲಿ ಶೇ.21.18ರಷ್ಟು ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 35.10ರಷ್ಟು ಮತದಾನವಾಗಿತ್ತು.

SCROLL FOR NEXT