9 ರಾಜ್ಯಗಳ 72 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ಆರಂಭ 
ದೇಶ

ಲೋಕ ಸಮರ: 9 ರಾಜ್ಯಗಳ 72 ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ಆರಂಭ

ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ಇಂದು 4ನೇ ಹಂತದ ಮತದಾನ ಆರಂಭವಾಗಿದ್ದು, 9 ರಾಜ್ಯಗಳ ಒಟ್ಟು 72 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.

ನವದೆಹಲಿ: ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ಇಂದು 4ನೇ ಹಂತದ ಮತದಾನ ಆರಂಭವಾಗಿದ್ದು, 9 ರಾಜ್ಯಗಳ ಒಟ್ಟು 72 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಒಟ್ಟು  ಹಂತಗಳ ಚುನಾವಣೆ ಈ ಪೈಕಿ ಈಗಾಗಲೇ ಮೂರು ಹಂತಗಳು ಮುಕ್ತಾಯವಾಗಿದ್ದು, ನಾಲ್ಕನೇ ಹಂತದಲ್ಲಿ ಜಮ್ಮು ಕಾಶ್ಮೀರ, ಜಾರ್ಖಂಡ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಒಡಿಶಾ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ ಹಲವು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಬಹುತೇಕ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದಲೇ ಮತದಾನ ಆರಂಭವಾಗಿದ್ದು, ಹಲವೆಡೆ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಅಲ್ಲಿ ಮತದಾನ ತಡವಾಗಿ ಆರಂಭವಾಯಿತು. ಮತದಾನ ಇಂದು ಸಂಜೆ 6 ಗಂಟೆಗೆ ಅಂತ್ಯವಾಗಲಿದ್ದು, ಸೂಕ್ಷ್ಮ ಭದ್ರತಾ ಸ್ಥಿತಿ ಇರುವ ಕೆಲ ಕ್ಷೇತ್ರಗಳಲ್ಲಿ ಮತದಾನ ಸಂಜೆ 4ಕ್ಕೇ ಅಂತ್ಯವಾಗಲಿದೆ.
ಪ್ರಮುಖವಾಗಿ ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರವೊಂದರಲ್ಲೇ 3 ಹಂತಗಳಲ್ಲಿ ಮತದಾನವಾಗುತ್ತಿದ್ದು, ಇವತ್ತು ಅದರ 2ನೇ ಹಂತವಾಗಿದೆ. ಪ್ರತ್ಯೇಕತಾವಾದಿಗಳ ಬಿಸಿ ಇರುವ ಈ ಕ್ಷೇತ್ರದಲ್ಲಿ ಮತದಾನ ಸಂಜೆ 4ಕ್ಕೇ ಮುಕ್ತಾಯವಾಗುತ್ತದೆ. ಹಾಗೆಯೇ, ನಕ್ಸಲ್ ಪೀಡಿತ ಜಾರ್ಖಂಡ್ ನ ಛಾತ್ರ, ಲೋಹರ್ ದಾಗ ಮತ್ತು ಪಲಾಮು ಕ್ಷೇತ್ರಗಳಲ್ಲೂ ಸಂಜೆ 4ರವರೆಗೆ ಮಾತ್ರ ಮತದಾನದ ಅವಕಾಶವಿದೆ. ಮಧ್ಯ ಪ್ರದೇಶದ ಬಾಲಘಾಟ್ ನ ಕೆಲ ಸ್ಥಳಗಳಲ್ಲೂ ಮತದಾನ ಬೇಗ ಅಂತ್ಯವಾಗುತ್ತದೆ. ಇದು ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ ಕೈಗೊಂಡ ನಿರ್ಧಾರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್