ಸಂಗ್ರಹ ಚಿತ್ರ 
ದೇಶ

ಡರ್ ಪೋಕ್ ಮೋದಿ, ಡರ್ ಪೋಕ್ ಬಿಜೆಪಿ: ಮತ್ತೆ ಬಿಜೆಪಿ ಕಾಲೆಳೆದ ರಮ್ಯಾ!

ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ತಮ್ಮ ಟ್ವೀಟ್ ಮೂಲಕ ಸುದ್ದಿಯಾಗಿದ್ದು, ಈ ಬಾರಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಸಮಯ ಮುಂದೂಡಿದ ಕುರಿತು ಬಿಜೆಪಿ ಮಾಡಿರುವ ವ್ಯಂಗ್ಯದ ಕುರಿತು ಟೀಕೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ನವದೆಹಲಿ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಮತ್ತೆ ತಮ್ಮ ಟ್ವೀಟ್ ಮೂಲಕ ಸುದ್ದಿಯಾಗಿದ್ದು, ಈ ಬಾರಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಸಮಯ ಮುಂದೂಡಿದ ಕುರಿತು ಬಿಜೆಪಿ ಮಾಡಿರುವ ವ್ಯಂಗ್ಯದ ಕುರಿತು ಟೀಕೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸುದ್ದಿಗೋಷ್ಠಿಯ ಸಮಯ ಬದಲಾದ ಕುರಿತು ಸುದ್ದಿಸಂಸ್ಛೆ ಮಾಡಿದ್ದ ಟ್ವೀಟ್ ಗೆ ವ್ಯಂಗ್ಯ ಮಾಡಿದ್ದ ಬಿಜೆಪಿ, ಬಹುಶಃ ರಾಹುಲ್ ಗಾಂಧಿ ಅವರಿಗೆ ನಿದ್ರೆಯಿಂದ ಏಳಲು ಸಮಯ ಬೇಕು ಎಂದೆನಿಸುತ್ತದೆ. ಹೀಗಾಗಿಯೇ ಸುದ್ದಿಗೋಷ್ಠಿ ಮುಂದೂಡಲಾಗಿದೆ. ಬೆಳಗ್ಗೆ ಬೆಳಗ್ಗೆಯೇ ಸುಳ್ಳು ಹರಡಿಸುವುದಾದರೂ ತಪ್ಪುತ್ತದೆ ಎಂದು ಟೀಕೆ ಮಾಡಿತ್ತು.
ಇದಕ್ಕೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿರುವ ರಮ್ಯಾ, ರಾಹುಲ್ ಗಾಂಧಿ ಅವರು ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ 24 ಬಾರಿ ಸುದ್ದಿಗೋಷ್ಠಿ ನಡೆಸಿದ್ದು, ನರೇಂದ್ರ ಮೋದಿ ಒಮ್ಮೆಯೂ ಸುದ್ದಿಗೋಷ್ಠಿ ನಡೆಸಿಲ್ಲ. ಭಯಭೀತ ಮೋದಿ, ಭಯಭೀತ ಬಿಜೆಪಿ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...