ನವದೆಹಲಿ: ಬಿಜೆಪಿ ತನ್ನ 2ನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಕೂಡ 35 ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ರಾಜ್ ಬಬ್ಬರ್ ಅವರ ಕ್ಷೇತ್ರವನ್ನು ಬದಲಿಸಲಾಗಿದ್ದು, ಈ ಹಿಂದೆ ಅವರನ್ನು ಮೊರಾದಾಬಾದ್ ಕ್ಷೇತ್ರಕ್ಕೆ ಅಂತಿಮಗೊಳಿಸಲಾಗಿತ್ತು. ಆದರೆ ಇದೀಗ ಅವರ ಕ್ಷೇತ್ರ ಬದಲಾವಣೆ ಮಾಡಲಾಗಿದ್ದು, ಅವರನ್ನು ಫತೇಹ್ ಪುರ್ ಸಿಕ್ರಿ ಕ್ಷೇತ್ರಕ್ಕೆ ಆಯ್ಕೆ ಮಾಡಲಾಗಿದೆ.
ಇನ್ನು ಮೊರಾದಾಬಾದ್ ನಲ್ಲಿ ಕಾಂಗ್ರೆಸ್ ನ ಇಮ್ರಾನ್ ಪ್ರತಾಪ್ ಗರ್ಹಿಯಾ ಅವರು ಸ್ಪರ್ಧೆ ಮಾಡಲಿದ್ದಾರೆ. ಉಳಿದಂತೆ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌದರಿ ಅವರು ತೆಲಂಗಾಣದ ಕಮ್ಮಂ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಮಾಜಿ ಕೇಂದ್ರ ಸಚಿವ ಕರಣ್ ಸಿಂಗ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ಉದ್ಧಮ್ ಪುರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಅಂತೆಯೇ ಒಡಿಶಾ ವಿಧಾನಸಭೆಗೂ ಕಾಂಗ್ರೆಸ್ ಪಕ್ಷ ತನ್ನ 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics