ದೇಶ

ಲೋಕಸಮರ: ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಂಗಳೂರು ವೈದ್ಯನ ನಾಮಪತ್ರ ತಿರಸ್ಕೃತ

Raghavendra Adiga
ಪುತ್ತೂರು: ಅಭ್ಯರ್ಥಿಗಳು ಮತ ಕೇಳಲು ತಮ್ಮ ಕೆಲಸಗಳನ್ನು ಉದಾಹರಣೆಯಾಗಿ ನೀಡದೆ ತಮ್ಮ ನಾಯಕರ ಹೆಸರನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ನನ್ನ ಸ್ಪರ್ಧೆ ಮೂಲಕ ಈ ಪ್ರಮುಖ ಸಂದೇಶವನ್ನು ಎಲ್ಲಾ ಮನೆಗಳಿಗೆ ತಲುಪಿಸಬೇಕು ಎನ್ನುವ ಮಹತ್ವಾಕಾಂಕ್ಷೆಯೊಡನೆ ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸಿದ್ದ ಮಂಗಳೂರು ವೈದ್ಯ, ಪತ್ರಿಕೋದ್ಯಮಿ  ಡಾ.ಯು.ಪಿ. ಶಿವಾನಂದ  ಅವರ ನಾಮಪತ್ರ ತಿರಸ್ಕೃತವಾಗಿದೆ.
ಪುತ್ತುರಿನ ‘ಸುದ್ದಿ ಬಿಡುಗಡೆ’ ಪ್ರಧಾನ ಸಂಪಾದಕ ಶಿವಾನಂದ ಅವರು ಕಳೆದ ಸೋಮವಾರ ಪ್ರಧಾನಿ ಮೋದಿ ಕ್ಷೇತ್ರ ವಾರಣಸಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.
ಗುರುವಾರ ನಾಮಪತ್ರ ಪರಿಶೀಲನೆ ನಡೆದಿದ್ದು ಈ ವೇಳೆ ಶಿವಾನಂದ ಅವರ ನಾಮಪತ್ರ ತಿರಸ್ಕೃತವಾಗಿದೆ.
ಇನ್ನು ಶಿವಾನಂದ ಕೇವಲ ವಾರಣಾಸಿಯಿಂದ ಮಾತ್ರವಲ್ಲದೆ ರಾಹುಲ್ ಗಾಂಧಿ ಅವರ ಕ್ಷೇತ್ರ ಅಏಥಿಯಿಂದಲೂ ಣಾಮಪತ್ರ ಸಲ್ಲಿಸಿದ್ದರು. ಅಮೇಥಿಯಲ್ಲಿ ಏ.20ರಂದು ನಾಮಪತ್ರ ಪರಿಶೀಲನೆ ನಡೆದಿದ್ದು ಶಿವಾನಂದ ಅವರ ನಾಮಪತ್ರ ಸ್ವೀಕೃತವಾಗಿದೆ.
ಇನ್ನೊಂದೆಡೆ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮತ್ತೋರ್ವ ಕನ್ನಡಿಗ ಬೆಂಗಳೂರಿನ ಸುಹೈಲ್ ಸೇಠ್ ನಾಮಪತ್ರ ಕೂಡ ತಿರಸ್ಕೃತಗೊಂಡಿದೆ. 
SCROLL FOR NEXT