ದೇಶ

ಬಿಹಾರದಲ್ಲಿ ನಾನು ಎರಡನೇ ಲಾಲು ಯಾದವ್: ತೇಜ್ ಪ್ರತಾಪ್

Nagaraja AB

ಜಿಹಾನ್ ಬಾದ್: ಬಿಹಾರದಲ್ಲಿ ಲೋಕಸಭಾ ಚುನಾವಣೆಯ  ಅಂತಿಮ ಹಂತಕ್ಕೆ ಕೆಲವೇ ದಿನ ಬಾಕಿ ಇರುವಂತೆಯೇ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ  ಹಿರಿಯ ಪುತ್ರ ತೇಜ್ ಪ್ರತಾಪ್ , ಸಹೋದರ ತೇಜಸ್ವಿ ಯಾದವ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಹಾನಾಬಾದ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಾಲು ಪ್ರಸಾದ್ ಯಾದವ್ ತುಂಬಾ ಉತ್ಸಾಹಭರಿತರಾಗಿದ್ದರು. ಒಂದು ದಿನದಲ್ಲಿ 10 ರಿಂದ 12 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಈಗಿನ ನಾಯಕರು ದಿನಕ್ಕೆ ಎರಡು ಅಥವಾ ನಾಲ್ಕು ಕಾರ್ಯಕ್ರಮಗಳಿಗೆ ಸುಸ್ತಾಗುತ್ತಾರೆ ಎಂದು ಹೇಳುವ ಮೂಲಕ ತೇಜಸ್ವಿ ಯಾದವ್ ನಾಯಕತ್ವ ವಿರುದ್ಧ ಕಿಡಿಕಾರಿದರು.

ಅನಾರೋಗ್ಯದ ಕಾರಣದಿಂದಾಗಿ ಅನೇಕ ಚುನಾವಣಾ ಕಾರ್ಯಕ್ರಮಗಳನ್ನು ತೇಜಸ್ವಿ ಯಾದವ್ ರದ್ದುಗೊಳಿಸಿದ್ದು, ನಾನು ಕೂಡಾ ಲಾಲು ಯಾದವ್ ರಕ್ತದಿಂದ ಬಂದವನು. ಲಾಲು ಪ್ರಸಾದ್ ಯಾದವ್ ನಮ್ಮ ಗುರು, ಮಾರ್ಗದರ್ಶಕರು, ಬಿಹಾರದಲ್ಲಿ ನಾನು ಎರಡನೇ ಲಾಲು ಪ್ರಸಾದ್ ಯಾದವ್ ಎಂದು ಹೇಳಿದರು.

ತೇಜಸ್ವಿ ಯಾದವ್ ಹೆಸರು ಹೇಳದ ತೇಜ್ ಪ್ರತಾಪ್, ಬೂಟ್ ನೆಕ್ಕುವವರಿಗೆ ಪಕ್ಷದಲ್ಲಿ ಟಿಕೆಟ್ ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ದಿನದಿಂದ ದಿನಕ್ಕೆ ಪಕ್ಷದಲ್ಲಿ ಹಿಡಿತ ಹೆಚ್ಚಾಗುತ್ತಿರುವ ತೇಜಸ್ವಿ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ಚಂದ್ರಶೇಖರ್ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ತೇಜಸ್ವಿ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT