ದೇಶ

ಫೇಸ್ ಬುಕ್ ನಲ್ಲಿ ರಾಜಕೀಯ ಜಾಹೀರಾತುಗಳ ಸಾಲಿನಲ್ಲಿ ಬಿಜೆಪಿಗೆ ಅಗ್ರಸ್ಥಾನ

Sumana Upadhyaya
ನವದೆಹಲಿ: ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಜಕೀಯ ಪಕ್ಷಗಳು ಮತ್ತು ಅವುಗಳ ಮೈತ್ರಿ ಪಕ್ಷಗಳು ಸೋಷಿಯಲ್ ಮೀಡಿಯಾಗಳ ಜಾಹೀರಾತುಗಳಲ್ಲಿ ಉಳಿದ ಪಕ್ಷಗಳಿಗಿಂತ ಮುಂದಿವೆ.
ಈ ಜಾಹೀರಾತು ಪ್ರಕಟಣೆಗೆ ಬಿಜೆಪಿ ಒಂದೇ ಪಕ್ಷ 3.68 ಕೋಟಿ ರೂಪಾಯಿ, ಕಾಂಗ್ರೆಸ್ 9.2 ಲಕ್ಷ, ಅಂಗಪಕ್ಷಗಳನ್ನು ಸೇರಿಸಿದರೆ ಬಿಜೆಪಿ 14 ಕೋಟಿ ರೂಪಾಯಿಗಳನ್ನು ಫೇಸ್ ಬುಕ್ ನಲ್ಲಿ ಮತ್ತು ಕಾಂಗ್ರೆಸ್ ಪಕ್ಷ 75 ಲಕ್ಷ ರೂಪಾಯಿ ಖರ್ಚು ಮಾಡಿದೆ.
ಸ್ಥಳೀಯ ಪಕ್ಷಗಳಾದ ತೆಲುಗು ದೇಶಂ ಪಾರ್ಟಿ, ವೈಎಸ್ಆರ್ ಕಾಂಗ್ರೆಸ್ ಮತ್ತು ಬಿಜು ಜನತಾ ದಳ ರಾಜಕೀಯ ಜಾಹೀರಾತುಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹಣ ಖರ್ಚು ಮಾಡಿವೆ.
ಫೇಸ್ ಬುಕ್ ನ ಜಾಹೀರಾತು ಲೈಬ್ರೆರಿ ಹುಡುಕಾಟದ ಡಾಟಾಬೇಸ್ ಆಗಿದ್ದು ಅದರಲ್ಲಿ ರಾಜಕೀಯ ಮತ್ತು ರಾಷ್ಟ್ರದ ಹಿತಾಸಕ್ತಿಯ ವಿಷಯಗಳು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಬರುತ್ತವೆ.
SCROLL FOR NEXT