ದೇಶ

ಮೋದಿ ಗಿಂತ ಮನಮೋಹನ್ ಸಿಂಗ್ ಸಾವಿರ ಪಟ್ಟು ಉತ್ತಮ ಪ್ರಧಾನಿ: ಅರವಿಂದ್ ಕೇಜ್ರಿವಾಲ್

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಾವಿರ ಪಟ್ಟು ಉತ್ತಮ ಪ್ರಧಾನಿ ಎಂದು ಎಎಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲರಾಗಿದ್ದಾರೆ ಆದ್ದರಿಂದ  ನಕಲಿ ರಾಷ್ಟ್ರೀಯತೆಯೊಂದಿಗೆ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ.ಮೋದಿಯದು ನಕಲಿ ರಾಷ್ಟ್ರೀಯತೆ, ಅದು ದೇಶಕ್ಕೆ ಅಪಾಯಕಾರಿಯಾದದ್ದು ಎಂದು  ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಕೆಲಸ ಮಾಡದ ಮೋದಿ ಸಶಸ್ತ್ರ ಪಡೆಗಳನ್ನು ವೋಟಿಗಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಕೇಜ್ರಿವಾಲ್,  ಮೋದಿಗಿಂತಲೂ ಮನ್ ಮೋಹನ್ ಸಿಂಗ್ ಸಾವಿರ ಬಾರಿ ಪ್ರಧಾನಿಯಾದರೂ ಉತ್ತಮ ಎಂದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ, ಮೋದಿ ಹಾಗೂ ಅಮಿತ್ ಶಾ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಗಟ್ಟುವುದೇ ನಮ್ಮ ಗುರಿಯಾಗಿದೆ. ಇವರಿಬ್ಬರನ್ನು ಉಳಿದ ಯಾರನ್ನಾನಾದರೂ ನಾವು ಬೆಂಬಲಿಸುತ್ತೇವೆ. ಈ ಬಾರಿಯ ಚುನಾವಣೆಯಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ಕೇಜ್ರಿವಾಲ್ ಹೇಳಿದರು.

ಬಿಜೆಪಿ ಮೋದಿ ಹೆಸರಿನಲ್ಲಿ ವೋಟ್ ಕೇಳುತ್ತಿದೆ ಆದರೆ, ಎಎಪಿ ಆರೋಗ್ಯ, ಶಿಕ್ಷಣ,  ನೀರು ಪೂರೈಕೆ, ಕಡಿಮೆ ವಿದ್ಯುತ್ ಶುಲ್ಕ ಮತ್ತಿತರ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸದ ಆಧಾರದ ಮೇಲೆ ಮತಗಳನ್ನು ಕೇಳುತ್ತಿದೆ. ಮೋದಿ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲರಾಗಿದ್ದಾರೆ. ಅವರು ಏನನ್ನೂ ಮಾಡಿಲ್ಲ ಎಂದು ಕೇಜ್ರಿವಾಲ್ ಕಿಡಿಕಾರಿದರು.
SCROLL FOR NEXT