ಮಂಗಳೂರು: ಕಳೆದ 28 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕಾರವಿಲ್ಲದೇ ಇರುವ ಕಾಂಗ್ರೆಸ್ ಹತಾಶರಾಗಿದ್ದಾರೆ, ಹೀಗಾಗಿ ಬೇರೆ ಕ್ಷೇತ್ರಗಳಲ್ಲಿರುವಂತೆ ಈ ಕ್ಷೇತ್ರದಲ್ಲೂ ಸಾಫ್ಟ್ ಹಿಂದುತ್ವದ ಮೊರೆ ಹೋಗಿದ್ದಾರೆ.
ಭಾರತ್ ಮಾತಾ ಕೀ ಜೈ, ಕೇಸರಿ ಶಾಲುಗಳು ಹಾಗೂ ಪಬ್ಲಿಸಿಟಿಗಾಗಿ ಕೇಸರಿ ಬಣ್ಣ ಹಾಗೂ ಭಗವದ್ಗೀತೆಯ ಸಾಲುಗಳನ್ನು ಬಳಸುವುದು ಕಾಂಗ್ರೆಸ್ ಪಕ್ಷದ ಸದ್ಯದ ಟ್ರೆಂಡ್ ಆಗಿದೆ,
ರೋಡ್ ಶೋ ಗಳಲ್ಲಿ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಜನರನ್ನು ಆಕರ್ಷಿಸಲು ಕೇಸರಿ ಬಣ್ಣ ಬಳಸಿಕೊಳ್ಳಲಾಗುತ್ತಿದೆ. ಬೆಳ್ತಂಗಡಿ, ಪುತ್ತೂರುಗಳಲ್ಲಿ ಸಚಿವ ಡಿ,ಕೆ ಶಿವಕುಮಾರ್ ಸ್ಟಾರ್ ಪ್ರಚಾರಕರಾಗಿದ್ದಾರೆ, ಮೈತ್ರಿ ಪಕ್ಷ ಅಭ್ಯರ್ಥಿಯಾಗಿರುವ ಮಿಥುನ್ ರೈ ಪರವಾಗಿ ಮತಯಾಚನೆ ಮಾಡಿದ್ದಾರೆ, ಹಸಿರು ಶಾಲು ಹೊದ್ದ ಮಿಥುನ್ ರೈ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗುತ್ತಿದ್ದರು.
ಹಿಂದುತ್ವ ಮೂಲಕ ಪ್ರಚಾರ ನಡೆಸಿ ಮತದಾರರನ್ನು ಆಕರ್ಷಿಸುವುದು ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಅವರ ತಂತ್ರವಾಗಿದೆ. ಅವರ ವಿರೋಧಿ ಅಭ್ಯರ್ಥಿಯಾಗಿರುವ ಮಿಥುನ್ ರೈ ಕೂಡ ಹಿಂದುತ್ವದಲ್ಲಿ ಕಡಿಮೆಯಿಲ್ಲ, ಚುನಾವಣಾ ಪ್ರಚಾರದ ತಂತ್ರಗಳನ್ನು ಬದಲಿಸುವುದು ಕಾಮನ್ ಎಂದು ಕಾಂಗ್ರೆಸ್ ಜಿಲ್ಲಾ ಪದಾಧಿಕಾರಿ ಹೇಳಿದ್ದಾರೆ.
ಎಲ್ಲಿ ಹಿಂದೂಗಳು ಜಾಸ್ತಿ ಸಂಖ್ಯೆಯಲ್ಲಿದ್ದಾರೋ ಅಲ್ಲಿ ಹಿಂದುತ್ವಾ ಅಜೆಂಡಾ ಬಳಸಲು ನಿರ್ದರಿಸಿರುವ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯಗಳಿರುವ ಪ್ರದೇಶದಲ್ಲಿ ಈ ಕಾರ್ಯತಂತ್ರ ಬಳಸುತ್ತಿಲ್ಲ, ಇನ್ನೂ ಮಿಥುನ್ ಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಬಾಕರ್ ಭಟ್ ಬೆಂಬಲ ಸೂಚಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು,
ದಕ್ಷಿಣ ಕನ್ನಡದಲ್ಲಿ ಇಂಥ ಕಾರ್ಯತಂತ್ರಗಳು ಕೆಲಸ ಮಾಡುವುದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇರುವ ಅಂತರ ಜನರಿಗೆ ತಿಳಿದಿದೆ, ತಮ್ಮ ಅಲುಗಾಡುತ್ತಿರುವ ಬುಡವನ್ನು ಭದ್ರಗೊಳಿಸುವ ಸಲುವಾಗಿ ಹಿಂದುತ್ವ ತತ್ವ ಸಿದ್ಧಾಂತವನ್ನು ಬಳಸಿಕೊಳ್ಳುತ್ತಿದ್ದಾರೆ, ಹಿಂದುತ್ವಕ್ಕಿಂತ ಹೆಚ್ಚಾಗಿ ರಾಷ್ಟ್ರೀಯತೆ ಪ್ರಮುಖವಾದ ಅಂಶವಾಗುತ್ತದೆ ಎಂದು ರಾಜಕೀಯ ತಜ್ಞ ಪ್ರೊ., ರಾಜರಾಂ ತೋಳ್ಪಾಡಿ ಹೇಳಿದ್ದಾರೆ.