ಬೆಂಗಳೂರು: ಹತ್ತು ವರ್ಷ ಆಡಳಿತ ನಡೆಸಿದವರ ಹೆಸರನ್ನು ಹೇಳೊಕೆ ಇವರಿಗೆ ಯೋಗ್ಯತೆ ಇಲ್ಲ, ಮನಮೋಹನ್ ಸಿಂಗ್ ಪರದೆಯ ಹಿಂದೆ ಸರಿಸಿದ್ದಾರೆ, ಅವರನ್ನು ಸ್ಟಾಚ್ಯೂ ಮಾಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಇವರು ರಾಜ್ಯದ ಮರ್ಯಾದೆ ತೆಗಿತಾ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ದ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.
ಜನ ಮೈಸೂರಿನಿಂದ ಇವರನ್ನು ಓಡಿಸಿದರು, ಇವರು ಗೆದ್ದ ಕ್ಷೇತ್ರದಲ್ಲಿಯೇ ಜನ ಇವರಿಗೆ ಮನೆ ಕೊಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಮೋದಿಯವರು ಈ ಸರ್ಕಾರವನ್ನು 10% ಅಲ್ಲ 20% ಕಮಿಷನ್ ಸರ್ಕಾರ ಎಂದರು. ಒಂದು ಇಲಾಖೆಯ ಮುಖ್ಯ ಇಂಜಿನಿಯರ್ ಹೋಟೆಲ್ ನಲ್ಲಿ ದುಡ್ಡು ಕಲೆಕ್ಟ್ ಮಾಡಿಕೊಂಡಿದ್ದರು. ಈಗ ಆ ದುಡ್ಡು ಕೆಲವು ಕಾರ್ಯಗಳಿಗೆ ಹಂಚಿಕೆ ಆಗುತ್ತೆ ಅಂತ ಕೇಳಿದ್ದೇನೆ. ಇದು ಬೆಂಗಳೂರು ಅಷ್ಟೆ ಅಲ್ಲ. ರಾಜ್ಯದ ಎಲ್ಲಾ ಮೂಲೆಗಳಲ್ಲಿ ಇಂಜನಿಯರ್ ಗಳಿಂದ ಕಲೆಕ್ಷನ್ ನಡೆಯುತ್ತಿದೆ ಎದು ಆರೋಪಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos