ರಮೇಶ್ ಜಿಗಜಿಣಗಿ 
ಕರ್ನಾಟಕ

ಬಿಜಾಪುರದಲ್ಲಿ ರಮೇಶ್ ಜಿಗಜಿಣಗಿಯದ್ದೇ ಹವಾ: ಕಮಲ ಪಕ್ಷಕ್ಕೆ ವರವಾಗಿದೆ ಮೈತ್ರಿ ಅಭ್ಯರ್ಥಿಯ ಅನನುಭವ?

ಆದಿಲ್ ಶಾಹಿ ಸುಲ್ತಾನರ ರಾಜಧಾನಿಯಾಗಿದ್ದ ಬಿಜಾಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮತ್ತು ಮೈತ್ರಿ ಅಭ್ಯರ್ಥಿ ಸುನಿತಾ ಚವಾಣ್ ನಡುವೆ ನೇರ ...

ವಿಜಯಾಪುರ: ಆದಿಲ್ ಶಾಹಿ ಸುಲ್ತಾನರ ರಾಜಧಾನಿಯಾಗಿದ್ದ ಬಿಜಾಪುರದಲ್ಲಿ  ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಮತ್ತು ಮೈತ್ರಿ ಅಭ್ಯರ್ಥಿ ಸುನಿತಾ ಚವಾಣ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ, 
2009 ಮತ್ತು 2014 ರಲ್ಲಿ ಎರಡು ಬಾರಿ ಜಿಗಜಣಗಿ  ಸಂಸದರಾಗಿ ಆಯ್ಕೆಯಾಗಿದ್ದಾರೆ,. ಹೀಗಾಗಿ ಅವರಿಗೆ  ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ, ಇನ್ನೂ ಮೈತ್ರಿ ಧರ್ಮದ ಪ್ರಕಾರ ಜೆಡಿಎಸ್ ವಿಜಯಾಪುರವನ್ನು ಬಿಟ್ಟುಕೊಡಲಾಗಿದೆ, ಇದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ತೀವ್ರ ಅಸಮಾಧಾನ ಮೂಡಿದೆ, ಕ್ಷೇತ್ರ ಪಡೆದುಕೊಂಡ ಜೆಡಿಎಸ್ ಅಭ್ಯರ್ಥಿಗಾಗಿ ತಿಣುಕಾಡಿತ್ತು, ಅಂತಿಮವಾಗಿ, ನಾಗತಾನ್ ಜೆಡಿಎಸ್ ಶಾಸಕ ದೇವಾನಂದ್ ಚವಾಣ್ ಅವರ ಪತ್ನಿ ಸುನೀತಾ ಅವರನ್ನು ಕಣಕ್ಕಿಳಿಸಿದೆ.
ಸುನೀತಾ ಅವರ ಅನುಭವವಿಲ್ಲದ ರಾಜಕೀಯ  ಬಿಜೆಪಿಗೆ ವರವಾಗಿದೆ,. ಜೊತೆಗೆ ಕೆಲವು ಕಾಂಗ್ರೆಸ್ ನಾಯಕರ ಜೊತೆ ಜಿಗಜಿಣಗಿ ಉತ್ತಮ ಸಂಬಂಧ ಹೊಂದಿದ್ದಾರೆ, ನನ್ನ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಹೇಳಿದ್ದಾರೆ. 
ಮತದಾರರ ಜೊತೆ ಉಫತ್ತಮ ಬಾಂಧವ್ಯ ಹೊಂದಿರುವ ಜಿಗಜಿಣಗಿ ಸಭೆಯಲ್ಲಿ ನೆರೆದಿದ್ದವರನ್ನು ಅಕ್ಕ, ಅಣ್ಣ ಮತ್ತು ಕಾಕಾ ಎಂದು ಮಾತನಾಡಿಸಿ ಜನರ ಮನಸ್ಸು ಗೆಲ್ಲುತ್ತಾರೆ, 
ಬಾಗಲಕೋಟೆಯಲ್ಲಿ  ಗುರುವಾರ  ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ, ಶುಕ್ರವಾರ ಸಚಿವೆ ಸ್ಮೃತಿ ಇರಾನಿ ಕೂಡ ಪ್ರಚಾರ ಮಾಡಲಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇನ್ನೂ ಪ್ರಚಾರಕ್ಕೆ ಆಗಮಿಸಬೇಕಿದೆ.
ಆದರೆ ಹಾಲಿ ಸಂಸದರ ವೈಫಲ್ಯವೇ  ನನ್ನ ಪರವಾಗಿದೆ, ನನಗೆ ನನ್ನ ಶಾಸಕ ಪತಿ ಹಾಗೂ ಲಂಬಾಣಿ ಸಮುದಾಯದ ಬೆಂಬಲವಿದೆ ಎಂದು ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಹೇಳಿದ್ದಾರೆ, ಇಲ್ಲಿನ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಹಾಗೂ ನೀರಿನ ಸಮಸ್ಯೆ ಬಗೆಹರಿಸಲು ಹಾಲಿ ಸಂಸದರು ಯಾವುದೇ ಅಭಿವೃದ್ಧಿ ಮಾಡಿಲ್ಲ,
ಈ ಭಾಗದಲ್ಲಿ ಜೆಡಿಎಸ್ ಗೆ ಅಪಾರ ಬೆಂಬಲವಿದೆ, ನಾಗಾಥಾನ್ ಮತ್ತು ಸಿಂಧಗಿಯಲ್ಲಿ ಜೆಡಿಎಸ್ ಶಾಸಕರಿದ್ದಾರೆ, ಇದು ನನ್ನ ಗೆಲುವಿಗೆ ಕಾರಣವಾಗುವ ಅಂಶಗಳು ಎಂದು ಮೈತ್ರಿ ಅಭ್ಯರ್ಥಿ ಸುನೀತಾ ಚವಾಣ್ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

SCROLL FOR NEXT