ಮೈಸೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತರೇ ಅದಕ್ಕೆ ಸಚಿವರಾದ ಸಿ.ಎಸ್ ಪುಟ್ಟರಾಜು ಮತ್ತು ಸಾ.ರಾ ಮಹೇಶ್ ಅವರೇ ಕಾರಣರಾಗುತ್ತಾರೆ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗದಂತೆ ನನ್ನನ್ನು ತಡೆ ಹಿಡಿದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾ.ರಾ ಮಹೇಶ್, ಪುಟ್ಟರಾಜು, ಶ್ರೀಕಂಠೇಗೌಡ ಹಾಗೂ ಶಿವರಾಮೇಗೌಡ ಅವರ ವರ್ತನೆ ನೋಡಿದರೇ ನಿಖಿಲ್ ಸೋಲಿಸಲು ಪಣ ತೊಟ್ಟಿದ್ದಾರೆ ಎಂದೆನಿಸುತ್ತೆದೆ ಎಂದು ತಿಳಿಸಿದ್ದಾರೆ.. ನಿಖಿಲ್ ಪರ ಪ್ರಚಾರಕ್ಕೆ ಹೋಗದಂತೆ ನನ್ನನ್ನು ತಡೆದಿದ್ದಾರೆ. ನಾನು ಯಾರ ಪರ ಕೆಲಸ ಮಾಡುತ್ತೇನೆ ಎಂಬ ಬಗ್ಗೆ ಇನ್ನೂ ಎರಡು ದಿನಗಳಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಸಂದೇಶ್ ನಾಗರಾಜ್ ತಿಳಿಸಿದ್ದಾರೆ.