ಪ್ರೀತಂಗೌಡ 
ಕರ್ನಾಟಕ

ಎ.ಮಂಜು ಪುಗ್ಸಟ್ಟೆ ಲೀಡರ್ ಆಗೋಕೆ ಬಂದಿದ್ದಾನೆ: ಬಿಜೆಪಿ ಅಭ್ಯರ್ಥಿ ಸೋಲಿಸಲು ಪ್ರೀತಂ ಗೌಡ ಸ್ಕೆಚ್: ಆಡಿಯೋ ವೈರಲ್

ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಪ್ಲಾನ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಏಕೆಂದರೇ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ...

ಹಾಸನ: ಬಿಜೆಪಿ ಅಭ್ಯರ್ಥಿ ಸೋಲಿಗೆ ಕಮಲ ನಾಯಕರೇ ಪ್ಲಾನ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಏಕೆಂದರೇ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ.
ಆಡಿಯೋದಲ್ಲಿ ಮಾತನಾಡಿದ ಪ್ರಕಾರ ಹಾಸನ ಬಿಜೆಪಿ ಅಭ್ಯರ್ಥಿ ಎ ಮಂಜು ಪುಕ್ಸಟ್ಟೆ ಲೀಡರ್ ಆಗೋಕೆ ಹೋಗುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ,  ಎ.ಮಂಜು ಎರಡು ಲಕ್ಷ ಎಂಬತ್ತು ಸಾವಿರ ಲೀಡ್‍ನಲ್ಲಿ ಸೋತ ಬಳಿಕ ಮತ್ತೆ ಸಿದ್ದರಾಮಯ್ಯನ ಹತ್ತಿರ ಹೋಗುತ್ತಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. ಹೀಗಾಗಿ ಹಾಸನ ಬಿಜೆಪಿ ಅಭ್ಯರ್ಥಿ ಸೋಲಿಗೆ ಶಾಸಕ ಪ್ರೀತಂಗೌಡ ಸ್ಕೆಚ್ ಹಾಕಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ವೋಟು ಬಂದ್ರೆ ಮಂಜಣ್ಣ ನಾನು ತಂದಿದ್ದೆ ಅಂತಾರೆ. ಸೋತು ಬಿಟ್ಟರೆ ಮತ್ತೆ ಸಿದ್ದರಾಮಯ್ಯ ಅಂತ ಹೊರಟು ಬಿಡ್ತಾರೆ. ಅವರೇನು ಪಾರ್ಟಿಯಲ್ಲಿ ಇರೋರಲ್ಲ. ಎರಡು ಸಾರಿ ಬಿಜೆಪಿಗೆ ಕೈಕೊಟ್ಟು ಹೋಗಿದ್ದಾರೆ. ಆಪರೇಷನ್ ಕಮಲ ಲಾಸ್ಟ್ ಟೈಮ್ 2008ರಲ್ಲಿ ಬಂದು ಹೋಗಿದ್ರು. ಅದಕ್ಕೂ ಮುಂಚೆ 1999ರಲ್ಲಿ ಗೆದ್ದು ವಾಪಸ್ ಹೋಗಿದ್ದಾರೆ. ಅವರು ಬಂದಾಗ ಏನೋ ಮಾಡುತ್ತಾರೆ. ಆಮೇಲೆ ಏನ್ ಗೊತ್ತಾ ಈಗ ನಾವು ಸೆಕಂಡ್ ಪ್ಲೇಸಲ್ಲಿ ಇದ್ದೀವಿ. ಥರ್ಡ್ ಪ್ಲೇಸ್ ಇದ್ದೀವಿ.. ಅವರು ಬಂದು ಪಾರ್ಟಿನಾ ಗುಡಿಸಿಕೊಂಡು ಹೋದರೆ ಮತ್ತೆ ನಾವು ಥರ್ಡ್ ಪ್ಲೇಸಿಗೆ ಹೋಗ್ಬೇಕಾಗುತ್ತೆ ಎಂದು ಆಡಿಯೋದಲ್ಲಿ ಸಂಭಾಷಣೆ ಇದೆ.
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎ.ಮಂಜು, ಈ ಚುನಾವಣೆ ಪ್ರೀತಂ ಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿದೆ, ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಈ ಆಡಿಯೋ ಜೆಡಿಎಸ್ ನವರ ಕುತಂತ್ರ ಎಂದು ಹೇಳಿದ್ದಾರೆ. ಆದ್ರೆ ಪ್ರೀತಂಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಮಾತಾಡಿದ್ದಾರೆ ಎನ್ನಲಾದ ಈ ಆಡಿಯೋ ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!