ಕರ್ನಾಟಕ

ದೋಸ್ತಿ ನಾಯಕರಿಂದ ಕಾರ್ಯಕರ್ತರನ್ನು ಗೆಲ್ಲಲು ಹೆಣಗಾಟ: ಪ್ರಕಾಶ್ ರಾಜ್

Sumana Upadhyaya
ಬೆಂಗಳೂರು: ರಾಜಕೀಯ ಪ್ರಜ್ಞೆ ಇರುವ ವ್ಯಕ್ತಿಗೆ ಆಳುವ ಪಕ್ಷವನ್ನು ಪ್ರಶ್ನೆ ಮಾಡುವ ಶಕ್ತಿ ಇರಬೇಕು. ಸಮಾಜದಲ್ಲಿ ಹೊಸ ಬದಲಾವಣೆ, ಕ್ರಿಯಾಶೀಲ ಸಮಾಜ ನಿರ್ಮಾಣಕ್ಕೆ ಪರ್ಯಾಯ ರಾಜಕಾರಣ ಬೇಕು. ಈ ಎಲ್ಲಾ ಉದ್ದೇಶಗಳ ಈಡೇರಿಕೆಗಾಗಿ ಚುನಾವಣೆಗೆ  ಇಳಿದಿದ್ದೇನೆಯೇ ಹೊರತು ಗೌರಿ ಲಂಕೇಶ್ ಹತ್ಯೆ ಹೋರಾಟದಿಂದ ಅಲ್ಲ. ತಾವು ರಾಜಕೀಯಕ್ಕೆ ಬರುವುದಕ್ಕೂ ಗೌರಿ ಹತ್ಯೆ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದೋಸ್ತಿ ಸರ್ಕಾರ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಿಂತಲೂ ಹೆಚ್ಚಿನದಾಗಿ ತಮ್ಮತಮ್ಮ ಪಕ್ಷದ ಕಾರ್ಯಕರ್ತರನ್ನು ಗೆಲ್ಲುವುದರಲ್ಲಿ  ಹೆಣಗಾಡುತ್ತಿವೆ ಹೀಗಾಗಿ  ಬೀದಿ ನಾಟಕ ನಡೆಯುತ್ತಿದೆ ಎಂದು ರಾಜ್ಯರಾಜಕಾರಣದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಬೆಳಕು ಚೆಲ್ಲಿದರು. ಸುಮ್ಮನಿದ್ದರೆ ಮತ್ತೊಂದು ಗೌರಿಯ ಹತ್ಯೆಯಾಗಬಹುದು ಎಂದು ಗೌರಿ ಹತ್ಯೆ ನಡೆದಾಗ ಅದನ್ನು ವಿರೋಧಿಸಲು ದೊಡ್ಡ ಧ್ವನಿಯಾದೆ ಆದರೆ ಗೌರಿ ಹತ್ಯೆ ಚುನಾವಣಾ ರಾಜಕೀಯ ಬರಲು ಅದೇ ಕಾರಣವಲ್ಲ ಎಂದು ಹೇಳಿದರು.
ಸಾಲಮನ್ನಾ ಮಾಡುವ ರಾಜಕೀಯ ಪಕ್ಷಗಳಿಂದ ಒಬ್ಬೊಬ್ಬ ಪ್ರಜೆಯ ಮೇಲೆ 50 ಸಾವಿರ ರೂ. ಹೊರೆ ಬೀಳುತ್ತಿದೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಜಾತ್ಯತೀತ ಎಂದು ಹೇಳಿಕೊಳ್ಳುತ್ತಿವೆಯಾದರೂ ಅದನ್ನು ಒಪ್ಪುವ ಸ್ಥಿತಿಯಲ್ಲಿ ಜನರಿಲ್ಲ. ತಮಗೆ ಹಿಂದೂ, ಮುಸ್ಲಿಂ ಎಂಬ ಬೇಧವಿಲ್ಲ. ಮನುಷ್ಯ ಇದ್ದ ಕಡೆ ವಿಕೃತ ಮನಸುಗಳು ಇರುತ್ತವೆ ಎಂದು ಪ್ರಕಾಶ್ ರಾಜ್ ಒಗಟಾಗಿ ಮಾತನಾಡಿದರು.
SCROLL FOR NEXT