ಬಿಜೆಪಿ ನಾಯಕರ ಜೊತೆ ಐಟಿ ಮೈತ್ರಿ: ರಿಜ್ವಾನ್‌ ಅರ್ಷದ್ 
ಕರ್ನಾಟಕ

ಬಿಜೆಪಿ ನಾಯಕರ ಜೊತೆ ಐಟಿ ಮೈತ್ರಿ: ರಿಜ್ವಾನ್‌ ಅರ್ಷದ್

ಬಿಜೆಪಿ ನಾಯಕರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ.

ಬೆಂಗಳೂರು: ಬಿಜೆಪಿ ನಾಯಕರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಾಗಿ ಕಾಂಗೆಸ್-ಜೆಡಿಎಸ್‌ ಅಭ್ಯರ್ಥಿಗಳನ್ನು ಐಟಿ ಅಧಿಕಾರಿಗಳು ಗುರಿಯಾಗಿಸಿದ್ದಾರೆ ಎಂದು ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಹೇಳಿದ್ದಾರೆ.
ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ  ರಿಜ್ವಾನ್ ಅರ್ಷದ್ ಆಪ್ತ ಅಮಾನುಲ್ಲಾ ಖಾನ್‌, ಕಮಲ್‌ ಪಾಷಾ, ನಯೀಜ್‌ ಖಾನ್‌ ನಿವಾಸ ಹಾಗೂ ಕಚೇರಿ ಸೇರಿದಂತೆ 20 ಕ್ಕೂ ಹೆಚ್ಚು ಕಡೆ 100 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು  ಪರಿಶೀಲನೆ ನಡೆಸಿದ್ದರು.
ಐಟಿ ದಾಳಿ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಿಜ್ವಾನ್‌ ಅರ್ಷದ್‌, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಮೋಹನ್‌ ಅವರ ಸಾಧನೆ ಶೂನ್ಯ. ಹೀಗಾಗಿ ಕ್ಷೇತ್ರದಲ್ಲಿ ಅವರ ವಿರುದ್ಧದ  ಅಲೆ ಇದೆ. ಬೆಂಗಳೂರಿನ ಮೂರೂ ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಸೋಲಿನ ಭೀತಿ ಎದುರಾಗಿದೆ. ಚುನಾವಣಾ ಪ್ರಚಾರದಿಂದ ಹಿಂದೆ ಸರಿಯುವಂತೆ ಮಾಡಲು, ಮುಜಗರ ಸೃಷ್ಟಿಸಲು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಐಟಿ ದಾಳಿ ನಡೆಸಲಾಗಿದೆ. 15-20 ವ್ಯಕ್ತಿಗಳ ಮೇಲೆ ಐಟಿ ದಾಳಿ ನಡೆಸಲಾಗಿದ್ದು, ತಮಗೆ ಪರಿಚಯವೇ ಇಲ್ಲದ 8-10 ವ್ಯಕ್ತಿಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ಎಂದು ಅವರು ಆರೋಪಿಸಿದರು.
ಕಾಂಗ್ರೆಸ್‌ ಪಕ್ಷದ ಶಾಸಕರ ಖರೀದಿಗೆ ಬಿಜೆಪಿ ನಾಯಕರು 10-20 ಕೋಟಿ ರೂ.ಗಳ ಆಮಿಷವೊಡ್ಡುವ ಮೂಲಕ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದ್ದರು. ಶಾಸಕರ ಖರೀದಿ ಸಂಬಂಧ ಐಟಿ ಇಲಾಖೆಗೆ ಪಕ್ಷದ ವತಿಯಿಂದ ದೂರು ನೀಡಲಾಗಿತ್ತಾದರೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ.  ಕ್ಷೇತ್ರದಲ್ಲಿ ತಮ್ಮ ಪ್ರಚಾರಕ್ಕೆ ಬಿಜೆಪಿ ಅಡ್ಡಿಯುಂಟು ಮಾಡುತ್ತಿದೆ. ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಾಧ್ಯವಾಗದ ಬಿಜೆಪಿ ನಾಯಕರು ಐಟಿ ದಾಳಿ ಮೂಲಕ ಹೆದರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ರಿಜ್ವಾನ್‌ ಅರ್ಷದ್‌ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ

ಭಾರತದಲ್ಲಿ ಶೀಘ್ರದಲ್ಲೇ ಗಂಟೆಗೆ 110 ಕಿ.ಮೀ ವೇಗದಲ್ಲಿ ಹೈಡ್ರೋಜನ್ ರೈಲುಗಳ ಕಾರ್ಯಾಚರಣೆ: ರೈಲ್ವೆ ಸುಳಿವು

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ 'ಸುಪ್ರೀಂ' ತೀರ್ಪಿಗೆ ವಿರುದ್ಧ: ನಿಜವಾದ ಫಲಾನುಭವಿಗಳು ಯಾರು? CMಗೆ ದೇವೇಗೌಡ ಪತ್ರ!

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?