ಸಿದ್ದರಾಮಯ್ಯ 
ಕರ್ನಾಟಕ

ಖರ್ಗೆ ಗೆಲ್ಲಿಸಿ ಕಲಬುರಗಿ ಘನತೆ ಎತ್ತಿಹಿಡಿಯಲು ಸಿದ್ದರಾಮಯ್ಯ ಕರೆ

ಖರ್ಗೆಯನ್ನು ಗೆಲ್ಲಿಸುವ ಮೂಲಕ ಉತ್ತರ ಕರ್ನಾಟಕ ಭಾಗದ ಗೌರವ ಎತ್ತಿಹಿಡಿಯಬೇಕು ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದ್ದಾರೆ.

ಅಫಜಲಪುರ:  ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೆದರಿಕೆಯಿಂದ ಅವರನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಣತೊಟ್ಟಿದ್ದಾರೆ .ಆದ್ದರಿಂದ ಖರ್ಗೆಯನ್ನು  ಗೆಲ್ಲಿಸುವ ಮೂಲಕ  ಉತ್ತರ ಕರ್ನಾಟಕ ಭಾಗದ ಗೌರವ ಎತ್ತಿಹಿಡಿಯಬೇಕು ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದ್ದಾರೆ.

ಅಫಜಲಪುರ ಪಟ್ಟಣದಲ್ಲಿ ಇಂದು ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಮೇಶ್ ಜಾಧವ್ ಒಳ್ಳೆಯನಿರಬಹುದು ಎಂದು ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದೆ. ಆಗಾಗ ನನ್ನ ಭೇಟಿ ಮಾಡುತ್ತಿದ್ದ  ಜಾಧವ್, ಖರ್ಗೆ ಹಾಗೂ ಅವರ ಮಗನನ್ನು ಬೈಯುತ್ತಿದ್ದ. ನೀನ್ಯಾಕೆ ಅವರನ್ನ ಬೈತಿಯಾ ಹೋಗಯ್ಯಾ. ಮುಂದಿನ ಸಲ ಕ್ಯಾಬಿನೆಟ್ ವಿಸ್ತರಣೆ ಮಾಡುವಾಗ ನಿನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕಳಿಸಿದ್ದೆ. ಆದರೆ, ಗೋಮುಖ ವ್ಯಾಘ್ರನಾದ ಜಾಧವ್ ನಮ್ಮ ಬೆನ್ನಿಗೆ ಚೂರಿ ಹಾಕಿ ಬಿಜೆಪಿಯವರ ಆಮಿಷಕ್ಕೆ ಬಲಿಯಾಗಿ ಈಗ ಖರ್ಗೆ ವಿರುದ್ಧ ಮತ ಯಾಚಿಸಲು  ಬರುತ್ತಿದ್ದಾನೆ. ಅಂತವನಿಗೆ ಮತ ಹಾಕ್ತೀರಾ ? ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?