ಕರ್ನಾಟಕ

ಮತದಾನ ವಿಡಿಯೋ ವಾಟ್ಸಪ್ ನಲ್ಲಿ ಹಾಕಿದ ಬಿಎಸ್ಪಿ ಅಭ್ಯರ್ಥಿ ಸಿ.ಎಸ್.ದ್ವಾರಕನಾಥ್

Srinivas Rao BV
ಚಿಕ್ಕಬಳ್ಳಾಪುರ: ಮತದಾನದ ಗೌಪ್ಯತೆಯನ್ನು ಕಾಪಾಡಬೇಕೆಂಬ ನಿಯಮವಿದ್ದರೂ ಚಿಕ್ಕಬಳ್ಳಾಪುರದ ಬಿಎಸ್‍ಪಿ ಅಭ್ಯರ್ಥಿ ಸಿ ಎಸ್ ದ್ವಾರಕನಾಥ್ ಅವರು ಮತದಾನ ಮಾಡಿರುವ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಂಡಿ ಎಡವಟ್ಟು ಮಾಡಿಕೊಂಡಿದ್ದಾರೆ.
ಚಿಂತಕರು,ಪ್ರಜ್ಞಾವಂತರೆಂದು ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಿಂದುಳಿದ ವರ್ಗಗಳ  ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕನಾಥ್ ಮತದಾನದ ಗೌಪ್ಯತೆ ಕಾಪಾಡುವುದರ ಬದಲು  ಮತದಾರನೋರ್ವ ಮಾಡಿರುವ ಮತದಾನದ ವಿಡಿಯೊವನ್ನು ತಮ್ಮ ವಾಟ್ಸಪ್ ಸ್ಟೇಟಸ್‍ಗೆ  ಹಾಕಿಕೊಂಡು ಚುನಾವಣಾ ನೀತಿ ಉಲ್ಲಂಘನೆ ಮಾಡಿರುವುದು  ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಮತದಾರನೋರ್ವ ಸಿ.ಎಸ್. ದ್ವಾರಕನಾಥ್ ಅವರಿಗೆ ಮತ ಹಾಕಿರುವ ವಿಡಿಯೋವನ್ನು ತನ್ನ  ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್  ಮಾಡಿದ್ದಾನೆ. ಇದೇ ವಿಡಿಯೋವನ್ನು ದ್ವಾರಕನಾಥ್ ಹಾಗೂ ಅವರ ಆಪ್ತ ಸಹಾಯಕ ಚಂದ್ರು ತಮ್ಮ ವಾಟ್ಸಪ್  ಸ್ಟೇಟಸ್‍ನಲ್ಲಿ ಹಾಕಿಕೊಂಡಿದ್ದಾರೆ.
ಕೆಲ ಮತದಾರರು ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿ ತಾವು ಮತದಾನ ಮಾಡಿರುವ  ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಎನ್  ಬಚ್ಚೇಗೌಡ ಅವರಿಗೆ ಮತ ಹಾಕಿರುವ ಫೋಟೋಗಳು ವೈರಲ್ ಆಗಿವೆ.
SCROLL FOR NEXT