ಕರ್ನಾಟಕ

ಲೋಕಸಭೆ ಚುನಾವಣೆ: ರಾಜ್ಯದಲ್ಲಿ ಶೇ.67.67ರಷ್ಟು ಮತದಾನ, ಮಂಡ್ಯದಲ್ಲಿ ಅತಿ ಹೆಚ್ಚು

Lingaraj Badiger
ಬೆಂಗಳೂರು: ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಟ್ಟು 11 ರಾಜ್ಯಗಳಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ರಾಜ್ಯದಲ್ಲಿ ರಾತ್ರಿ 8 ಗಂಟೆಯವರೆಗೆ  ಒಟ್ಟಾರೆ ಶೇ.67.67 ರಷ್ಟು ಮತದಾನವಾಗಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಮಾಹಿತಿ ನೀಡಿದ್ದು, ಮಂಡ್ಯದಲ್ಲಿ ಶೇ. 80ಕ್ಕೂ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ ಶೇ.49.76 ರಷ್ಟು ಮತದಾನವಾಗಿದೆ.
ಜಿಲ್ಲೆಗಳಲ್ಲಿ ಶೇಕಡಾವಾರು ಮತದಾನದ ವಿವರ
ಹಾಸನ                       77.28%
ದಕ್ಷಿಣ ಕನ್ನಡ             77.70%
ಚಿತ್ರದುರ್ಗ                  70.59 %
ತುಮಕೂರು                 77.01%
ಮಂಡ್ಯ                        80. 23%
ಮೈಸೂರು                   68.72%
ಚಾಮರಾಜನಗರ         73.45%
ಬೆಂಗಳೂರು ಗ್ರಾಮಾಂತರ 64.9%
ಬೆಂಗಳೂರು ಉತ್ತರ           50.03%
ಬೆಂಗಳೂರು ಕೇಂದ್ರ           49.76 %
ಬೆಂಗಳೂರು ದಕ್ಷಿಣ            53.53 %
ಚಿಕ್ಕಬಳ್ಳಾಪುರ     76.14%
ಕೋಲಾರ      71.99%
ಉಡುಪಿ, ಚಿಕ್ಕಮಗಳೂರು  75.26%
SCROLL FOR NEXT