ಕರ್ನಾಟಕ

ಶೋಭಾ ಕರಂದ್ಲಾಜೆಗೆ ತಮ್ಮದೇ ಓಟಿಲ್ಲ ಎನ್ನುವಾಗ ಗೆಲುವು ಹೇಗೆ ಸಾಧ್ಯ: ಪ್ರಮೋದ್ ಮಧ್ವರಾಜ್ ವ್ಯಂಗ್ಯ

Srinivasamurthy VN
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ಇಲ್ಲಿ ಮತದಾನದ ಹಕ್ಕಿಲ್ಲ, ಅವರದೇ ಮತ ಅವರಿಗಿಲ್ಲ ಎನ್ನುವಾಗ ಅವರ ಗೆಲುವು ಹೇಗೆ ಸಾಧ್ಯ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಆಭ್ಯರ್ಥಿ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ತಾಯಿ, ಪತ್ನಿ, ಅಕ್ಕನ ಜತೆ ಉಡುಪಿಯ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತದಾನ ಮಾಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಾನು ಮೈತ್ರಿ ಅಭ್ಯರ್ಥಿ ಆದಾಗ ಅಪಸ್ವರವಿತ್ತು. ಈಗ ಕಾರ್ಯಕರ್ತರಿಗೆ ಒಳ್ಳೆಯ ನಿರ್ಧಾರ ಎಂಬ ಭಾವನೆ ಬಂದಿದೆ. ಕಾರ್ಯಕರ್ತರು ನಾಯಕರಿಗೆ ಮನವರಿಕೆ ಮಾಡಲಾಗಿದೆ. ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಫೀಲ್ಡ್ ವರ್ಕ್ ಆಗಿದೆ. ಎಲ್ಲಾ ಪ್ರಚಾರದಲ್ಲೂ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿದರು.
ಅಂತೆಯೇ 'ಮೋದಿ ಹೆಸರಿನಲ್ಲಿ ಕೆಟ್ಟ ಜನಪ್ರತಿನಿಧಿ ಆಯ್ಕೆ ನಮಗೆ ನಷ್ಟ ಎಂದು ಜನರಿಗೆ ಮನವರಿಕೆಯಾಗಿದೆ. ರಾತ್ರಿ ಕಂಡ ಬಾವಿಗೆ ಹಗಲು ಬೀಳುವುದು ಬೇಡ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಚಿಹ್ನೆ ಬಗ್ಗೆ ಮತದಾರರಿಗೆ ಕಾರ್ಯಕರ್ತರು ಮನದಟ್ಟು ಮಾಡಿದ್ದಾರೆ. ಮೈತ್ರಿ ಧರ್ಮದಲ್ಲಿ ಚಿಹ್ನೆ ಸೆಕೆಂಡರಿ. ಜಾತ್ಯತೀತ ಶಕ್ತಿಗಳು ಒಂದುಗೂಡುವುದು ಮುಖ್ಯ. ಪ್ರಥಮ ಬಾರಿಗೆ ಜೆ.ಡಿ.ಎಸ್ ಚಿಹ್ನೆಗೆ ನನಗೆ ವೋಟ್ ಹಾಕಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆಗೆ ತಮ್ಮದೇ ಓಟಿಲ್ಲ ಎನ್ನುವಾಗ ಗೆಲುವು ಹೇಗೆ ಸಾಧ್ಯ
ಇನ್ನು ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ ಪ್ರಮೋದ್ ಮಧ್ವರಾಜ್ ಅವರು, 'ನನ್ನ ಎದುರಾಳಿ ಶೋಭಾ ಕರಂದ್ಲಾಜೆ ಅವರಿಗೆ ಕ್ಷೇತ್ರದಲ್ಲಿ ವೋಟ್ ಮಾಡುವ ಅವಕಾಶ ಇಲ್ಲ. ಹೀಗಾಗಿ ಶೋಭಾ ಅವರಿಗೆ ತಮ್ಮದೇ ಓಟು ಬೀಳುವುದಿಲ್ಲ. ಇನ್ನು ಅವರ ಗೆಲುವು ಅಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
SCROLL FOR NEXT