ಸಾಂದರ್ಭಿಕ ಚಿತ್ರ 
ಕರ್ನಾಟಕ

ಕುಣಿಗಲ್: ಮತದಾನಕ್ಕೆ ಬಂದ ಮಹಿಳೆ ಅಪಹರಣ, ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಮತದಾನ ಮಾಡಲು ಊರಿಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ಆಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಕುಣಿಗಲ್ :  ಮತದಾನ ಮಾಡಲು ಊರಿಗೆ ತೆರಳುತ್ತಿದ್ದ ಮಹಿಳೆಯನ್ನು ಅಪಹರಿಸಿದ ದುಷ್ಕರ್ಮಿಗಳು ಆಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಶಾಂತಮ್ಮ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಮಲ್ಲಾಘಟ್ಟ ಗ್ರಾಮದವರಾದ ಇವರು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಮತದಾನ ಮಾಡಲು ಗುರುವಾರ ಬೆಳಗ್ಗೆ ಸ್ವಗ್ರಾಮ ಮಲ್ಲಾಘಟ್ಟಕ್ಕೆ ತೆರಳಲು ಬೆಂಗಳೂರಿನಿಂದ ಕುಣಿಗಲ್ ಪಟ್ಟಣಕ್ಕೆ ಬಂದಿದ್ದರು.

ಮೋದೂರಿನ ಅಜ್ಜಿ ಮನೆಯಲ್ಲಿದ್ದ ಮಗಳ ದಾರಿ ಕಾಯುತ್ತಾ ಹುಚ್ಚ ಮಾಸ್ತಿಗಡ ವೃತ್ತದ  ತಂಗುದಾಣದಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಕೆಲ ದುಷ್ಕರ್ಮಿಗಳು, ನಿಮ್ಮ ಸಂಬಂಧಿ ಮತ ಚಲಾಯಿಸಲು ಕರೆತರಲು ಹೇಳಿದ್ದಾರೆ ಎಂದು ನಂಬಿಸಿ ಟಾಟಾ ಸುಮೊ ವಾಹನದ ಬಳಿ ಕರೆದೊಯ್ಡು ಥಳಿಸಿ ಅಪಹರಣ ಮಾಡಿದ್ದಾರೆ. ಅವರ ಬಳಿಯಿದ್ದ  30 ಗ್ರಾಂ ಚಿನ್ನದ ಸರ , 6 ಸಾವಿರ ರೂ ನಗದು, ಮೊಬೈಲ್ ದೋಚಿದ್ದಾರೆ.

ಚಿನ್ನದ ಸರದಲ್ಲಿದ್ದ ಮಾಂಗಲ್ಯ  500 ರೂಪಾಯಿಯನ್ನು ನೀಡಿ  ಕಾಡಶೆಟ್ಟಿಹಳ್ಳಿ ಬಳಿ ವಾಹನದಿಂದ ಆ ಮಹಿಳೆಯನ್ನು ತಳ್ಳಿ ಪರಾರಿಯಾಗಿದ್ದಾರೆ. ನಂತರ ಮಹಿಳೆ ಸ್ಥಳೀಯರ ನೆರವಿನಿಂದ ಬಂದು ಕುಣಿಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?