ಮಂಡ್ಯದಲ್ಲಿ ಅಭಿಷೇಕ್ ಗೌಡ 
ಕರ್ನಾಟಕ

ಮೈಸೂರು ಏರ್ ಪೋರ್ಟ್ ನಿಂದ ಸಿಂಗಾಪುರಕ್ಕೆ ಹೋಗುತ್ತೇನೆ: ಅಭಿಷೇಕ್ ಟಾಂಗ್

ಏಪ್ರಿಲ್ 19ರ ನಂತರ ಮಂಡ್ಯದಲ್ಲಿರುವ ಟೂರಿಂಗ್‌ ಟಾಕೀಸ್‌ ಪ್ಯಾಕಪ್ ಆಗುತ್ತದೆ ಎಂದು ಟೀಕಿಸಿದವರಿಗೆ ಅಭಿಷೇಕ್‌ ಅಂಬರೀಷ್‌ ಟಾಂಗ್ ನೀಡಿದ್ದಾರೆ. ಚುನಾವಣೆ ಆದ .,..

ಮಂಡ್ಯ:  ಏಪ್ರಿಲ್ 19ರ ನಂತರ ಮಂಡ್ಯದಲ್ಲಿರುವ ಟೂರಿಂಗ್‌ ಟಾಕೀಸ್‌ ಪ್ಯಾಕಪ್ ಆಗುತ್ತದೆ ಎಂದು ಟೀಕಿಸಿದವರಿಗೆ ಅಭಿಷೇಕ್‌ ಅಂಬರೀಷ್‌ ಟಾಂಗ್ ನೀಡಿದ್ದಾರೆ. ಚುನಾವಣೆ ಆದ ನಂತರ ಸುಮಲತಾ ಮತ್ತು ಅಭಿ ಇಬ್ಬರೂ ಸಿಂಗಾಪುರಕ್ಕೆ ಹೋಗುತ್ತಾರೆ. ಇದಕ್ಕಾಗಿ ಟಿಕೆಟ್‌ ಕೂಡ ಬುಕ್‌ ಆಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. 
ಈ ಆರೋಪಗಳಿಗೆ ಖುದ್ದು ಅಭಿಷೇಕ್ ಅಂಬರೀಷ್ ಟಾಂಗ್ ನೀಡಿದ್ದಾರೆ. ಮತದಾನ ಮಾಡಿದ ಮಾರನೆಯ ದಿನ ಅಂದರೆ ಶುಕ್ರವಾರ ಮಂಡ್ಯದಲ್ಲಿ ತಿರುಗಾಡಿದ್ದಾರೆ. 
ನಾನು ಈ ಟೀ ಅಂಗಡಿಯವರಿಗೆ ಮಾತು ಕೊಟ್ಟಿದ್ದೆ. ಚುನಾವಣೆ ಮುಗಿದ ಬಳಿಕ ಬರುವುದಾಗಿ ಹೇಳಿದ್ದೆ. ಅದರಂತೆ ನಾನು ಇಂದು ಇಲ್ಲಿಗೆ ಬಂದು ಟೀ ಕುಡಿದು ಹೋಗ್ತಿದ್ದೇನೆ. ಅದೇ ಸಮಯಕ್ಕೆ ಸರಿಯಾಗಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ನಾನು‌, ಅಮ್ಮ ಸಿಂಗಾಪುರಕ್ಕೆ ಹೋಗುವ ಸುಳ್ಳು ಸುದ್ದಿ ಹಬ್ಬಿಸಿದ್ರು. ಇವತ್ತು ನಾನು ನಿಮ್ಮ ಮುಂದೆ ಇದ್ದೇನೆ. ಯಾರು ಈ ಸುದ್ದಿ ಹಬ್ಬಿಸಿದ್ರೋ ಅವ್ರಿಗೆ ತಲುಪುತ್ತೆ ಬಿಡಿ ಎಂದರು. 
ಅವರಿಗೆ ಇಲ್ಲಿಗೆ ಬರಲು ಹೇಳಿ. ನಾನು ಇಲ್ಲಿಯೇ ಇದ್ದು ಅವರೊಂದಿಗೆ ಹರಟೆ ಹೊಡೆದು ಹೊರಡುತ್ತೇನೆ ಎಂದು ಅಭಿಷೇಕ್‌ ಅಂಬರೀಷ್‌ ತಿಳಿಸಿದರು. ನಾನು ಇಲ್ಲಿಂದ ಮೈಸೂರು ಏರ್ ಪೋರ್ಟ್ ಗೆ ತೆರಳಿ ಅಲ್ಲಿಂದ ಸಿಂಗಾಪುರಕ್ಕೆ ಹಾರುತ್ತೇನೆ ಎಂದು ವ್ಯಂಗ್ಯ ವಾಡಿದರು.
ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಿದೆ. ಹಾಗಾಗಿ ನಮ್ಮ ಅಮ್ಮ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಯಾರು ಕೂಡ ಬೆಟ್ಟಿಂಗ್ ಕಟ್ಟಿ  ಹಣ ಹಾಳು ಮಾಡಿಕೊಳ್ಳಬೇಡಿ ಎಂದು ಅಭಿ ಮನವಿ ಮಾಡಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)