ಕರ್ನಾಟಕ

ಪ್ರಧಾನಿ ಮೋದಿಯವರದ್ದು ವ್ಯಾಕ್ಸ್, ಮೇಕಪ್ ಮುಖ; ಸಿಎಂ ಕುಮಾರಸ್ವಾಮಿ ಹೀಗಂದಿದ್ದೇಕೆ?

Sumana Upadhyaya
ಹುಬ್ಬಳ್ಳಿ: ನನಗೆ ಮೋದಿ ಅವರಂತೆ ಪ್ರತಿದಿನ ಬೆಳಗ್ಗೆ ವ್ಯಾಕ್ಸಿಂಗ್ ಮಾಡಿಸುವುದಿಲ್ಲ, ನಾನು ಬಡ ಜನರ ಜೊತೆ ಇರುತ್ತೇನೆ, ಬಡವರನ್ನು ಸ್ಪರ್ಶಿಸಿದ ಮೇಲೆ ನಾನು ಕೈ ತೊಳೆದುಕೊಳ್ಳುವುದಿಲ್ಲ ಎಂದು ಹೇಳಿರುವುದಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಮರ್ಥನೆ ನೀಡಿದ್ದಾರೆ.
ಜನರು ಮೋದಿಯವರ ಮುಖ ನೋಡಿ ನಮಗೆ ವೋಟ್ ಹಾಕಿ ಎಂದು ಬಿಜೆಪಿ ನಾಯಕರು ಕೇಳುತ್ತಾರೆ ಅದಕ್ಕಾಗಿ ನಾನು ಹಾಗೆ ಹೇಳಿದೆ, ಮೋದಿಯವರ ಮುಖ ನೋಡಿದರೆ ಬರೀ ಮೇಕಪ್, ವ್ಯಾಕ್ಸ್ ಕಾಣಬಹುದಷ್ಟೆ ಎಂಬರ್ಥದಲ್ಲಿ ಹೇಳಿದೆ ಎಂದು ಕುಮಾರಸ್ವಾಮಿ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ನೀವೇಕೆ ಸಾರ್ವಜನಿಕ ಸಭೆ, ಭಾಷಣಗಳಲ್ಲಿ ಕಣ್ಣೀರು ಹಾಕುತ್ತೀರಿ ಎಂದು ಕೇಳಿದ್ದಕ್ಕೆ, ನಾನು ಭಾವನಾ ಜೀವಿ. ಸುತ್ತಮುತ್ತ ಬಡಜನರ ಕಷ್ಟಗಳನ್ನು ನೋಡಿ ಬೆಳೆದವರು ನಾವು. ನಾವು ಯಾವಾಗಲೂ ಬಡಜನರ ಜೊತೆ ಬೆರೆಯಲು ಇಚ್ಛಿಸುತ್ತೇವೆ ಎಂದರು.
ಕಳೆದ 4 ತಿಂಗಳಿನಿಂದ ನಮ್ಮ ಸ್ಥಳೀಯ ಚಾನೆಲ್ ಗಳು ಅನಗತ್ಯವಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆಯೇ ವರದಿ ನೀಡುತ್ತಿವೆ. ಸುಮಲತಾ ಅಂಬರೀಷ್ ಅವರು ಈ ದೇಶದ ಹೊಸ ನಾಯಕಿಯಾಗಿ ಹೊರಹೊಮ್ಮುತ್ತಾರೆ ಎಂಬರ್ಥದಲ್ಲಿ ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ನಾನು ಮಾಧ್ಯಮದವರನ್ನು ಟೀಕಿಸಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
SCROLL FOR NEXT